ಬೆಳಗಾವಿ:ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬಾಲಕನನ್ನು ಪ್ರಾಣಾಪಾಯದಿಂದ ರಕ್ಷಿಸಿ ಸಮಯಪ್ರಜ್ಞೆ ತೋರಿದ ವಡೇರಹಟ್ಟಿ ಗ್ರಾಮದ ಇಬ್ಬರು ಬಾಲಕರಿಗೆ ಕೇಂದ್ರ ಗೃಹ ಸಚಿವಾಲಯ ನೀಡುವ ಜೀವನ ರಕ್ಷಾ ಪದಕವನ್ನು ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ನೀಡಿ ಸನ್ಮಾನಿಸಿ ಗೌರವಿಸಿದರು.
ಹಳ್ಳದಲ್ಲಿ ಕೊಚ್ಚಿ ಹೋಗ್ತಿದ್ದ ಬಾಲಕನ ರಕ್ಷಿಸಿದ್ದ ಸಾಹಸಿ ಬಾಲಕರಿಗೆ ’’ಜೀವನ ರಕ್ಷಾ’’ ಪದಕ ಪ್ರದಾನ - boys who rescued a man floating
ಮಹಾನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಗೋಕಾಕ್ ತಾಲೂಕಿನ ವಡೇರಟ್ಟಿ ಗ್ರಾಮದ ಸಿದ್ದಪ್ಪ ಹೊಸಟ್ಟಿ, ಶಿವಾನಂದ ಹೊಸಟ್ಟಿ ಎಂಬ ಬಾಲಕರಿಗೆ ಕೇಂದ್ರ ಸರ್ಕಾರದಿಂದ ಮಂಜೂರಾದ ಜೀವನ ರಕ್ಷಾ ಪದಕ, ತಲಾ ಒಂದು ಲಕ್ಷ ರೂ.ಗಳ ಚೆಕ್ ಹಾಗೂ ಪ್ರಮಾಣಪತ್ರ ವಿತರಣೆ ಮಾಡಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿ ವಿಕ್ರಮ ಆವಟೆ, ಚಂದ್ರಶೇಖರ್ ನೀಲಗಾರ ಸಮ್ಮುಖದಲ್ಲಿ ಮಹಾನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಗೋಕಾಕ್ ತಾಲೂಕಿನ ವಡೇರಟ್ಟಿ ಗ್ರಾಮದ ಸಿದ್ದಪ್ಪ ಹೊಸಟ್ಟಿ, ಶಿವಾನಂದ ಹೊಸಟ್ಟಿ ಎಂಬ ಬಾಲಕರಿಗೆ ಕೇಂದ್ರ ಸರ್ಕಾರದಿಂದ ಮಂಜೂರಾದ ಜೀವನ ರಕ್ಷಾ ಪದಕ, ತಲಾ ಒಂದು ಲಕ್ಷ ರೂ.ಗಳ ಚೆಕ್ ಹಾಗೂ ಪ್ರಮಾಣಪತ್ರ ಪ್ರದಾನ ಮಾಡಿದರು.
ಗೋಕಾಕ್ ತಾಲೂಕಿನ ವಡೇರಹಟ್ಟಿ ಗ್ರಾಮದ ಇಂದ್ರವೇಣಿ ಹಳ್ಳದಲ್ಲಿ 2018 ಮೇ 8ರಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬಾಲಕನನ್ನು ಪ್ರಾಣಾಪಾಯದಿಂದ ರಕ್ಷಿಸಿ ಈ ಇಬ್ಬರು ಬಾಲಕರು ಸಾಹಸ ಪ್ರದರ್ಶಿಸಿದ್ದರು. ಇವರ ಸಾಹಸ ಹಾಗೂ ಸಮಯ ಪ್ರಜ್ಞೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು 2018 ನ. 14ರಂದು ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಿದ್ದರು.