ಕರ್ನಾಟಕ

karnataka

ETV Bharat / state

ಹಫ್ತಾ ನೀಡದಿದ್ರೆ ಪ್ರಾಣತೆಗೆಯುವೆ: ವ್ಯಕ್ತಿಯೊಬ್ಬನಿಂದ ಸರ್ಕಾರಿ ವೈದ್ಯೆಗೆ ಜೀವ ಬೆದರಿಕೆ - Belagavi latest news

ಕಿತ್ತೂರು ಪ್ರಾಥಮಿಕ‌ ಸಮುದಾಯ ಕೇಂದ್ರದ ವೈದ್ಯಾಧಿಕಾರಿಗೆ ಅಬ್ದುಲ್ ಮುಜಾವರ್ ಎಂಬಾತ ಹಫ್ತಾ ನೀಡದಿದ್ರೆ ಪ್ರಾಣತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು. ಈ ಬಗ್ಗೆ ಸರ್ಕಾರಿ ವೈದ್ಯೆ ದೂರು ಸಹ ದಾಖಲಿಸಿದ್ದಾರೆ.

Life threatening
ಜೀವ ಬೆದರಿಕೆ

By

Published : May 13, 2020, 1:20 PM IST

ಬೆಳಗಾವಿ:ಕೊರೊನಾ ಸೋಂಕು ಹರಡದಂತೆ ಶ್ರಮಿಸುತ್ತಿರುವ ವೈದ್ಯೆಗೆ ಹಫ್ತಾ ನೀಡುವಂತೆ ವ್ಯಕ್ತಿಯೊಬ್ಬ ಪೀಡಿಸುವ ಜತೆಗೆ ಜೀವ ಬೆದರಿಕೆ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.

ಕಿತ್ತೂರು ನಿವಾಸಿ ಅಬ್ದುಲ್ ಮುಜಾವರ್ ಎಂಬಾತನ ವಿರುದ್ಧ ವೈದ್ಯೆ ಡಾ. ಅನ್ನಪೂರ್ಣ ಅಂಗಡಿ ಜೀವ ಬೆದರಿಕೆಯ ಆರೋಪ ಮಾಡಿದ್ದಾರೆ. ಕಿತ್ತೂರು ಪ್ರಾಥಮಿಕ‌ ಸಮುದಾಯ ಕೇಂದ್ರದ ವೈದ್ಯಾಧಿಕಾರಿಯಾಗಿ ಡಾ.ಅನ್ನಪೂರ್ಣ ಅಂಗಡಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಾನು ರೌಡಿ, ಪ್ರತಿ ತಿಂಗಳು ಮಾಮೂಲಿ ನೀಡಬೇಕು. ಇಲ್ಲದಿದ್ದರೆ ಪ್ರಾಣ ತೆಗೆಯುವುದಾಗಿ ಅಬ್ದುಲ್ ಮುಜಾವರ್ ಸರ್ಕಾರಿ ವೈದ್ಯೆಗೆ ಧಮ್ಕಿ ಹಾಕಿದ್ದಾ‌ನೆ. ವೈದ್ಯೆಯ ಸಹೋದ್ಯೋಗಿ ಡಾ. ಕಾಂಬಳೆ ಎಂಬಾತ ಅಬ್ದುಲ್ ಮುಜಾವರ್​ಗೆ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ‌. ಅಬ್ದುಲ್ ಮುಜಾವರ್ ವಿರುದ್ಧ ವೈದ್ಯೆ ಕಿತ್ತೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ABOUT THE AUTHOR

...view details