ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಂದೂರ ಟೇಕ್ ಗ್ರಾಮದ ರೈತರ ಜಮೀನಿನಲ್ಲಿ ಚಿರತೆಯೊಂದು ಪತ್ತೆಯಾಗಿದೆ. ಜಮೀನಿನ ಪಕ್ಕದ ರಸ್ತೆಯಲ್ಲಿ ಚಿರತೆಯೊಂದು ರಾಜಾರೋಷವಾಗಿ ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಚಿಕ್ಕೋಡಿಯಲ್ಲಿ ರಾಜಾರೋಷವಾಗಿ ರೈತರ ಜಮೀನಿನಲ್ಲಿ ಓಡಾಡುತ್ತಿರೋ ಚಿರತೆ : ಭಯಭೀತರಾದ ಜನತೆ..! - ಚಿಕ್ಕೋಡಿ ತಾಲೂಕಿನ ಚಂದೂರ ಟೇಕ್ ಗ್ರಾಮ
ಬೆಳಗಾವಿ ಜಿಲ್ಲೆಯ ಚಂದೂರ ಟೇಕ್ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಈ ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
![ಚಿಕ್ಕೋಡಿಯಲ್ಲಿ ರಾಜಾರೋಷವಾಗಿ ರೈತರ ಜಮೀನಿನಲ್ಲಿ ಓಡಾಡುತ್ತಿರೋ ಚಿರತೆ : ಭಯಭೀತರಾದ ಜನತೆ..! leopard-found-in-chikkodi-belgaum](https://etvbharatimages.akamaized.net/etvbharat/prod-images/768-512-16010217-thumbnail-3x2-yyy.jpg)
ಚಿಕ್ಕೋಡಿಯಲ್ಲಿ ರಾಜಾರೋಷವಾಗಿ ರೈತರ ಜಮೀನಿನಲ್ಲಿ ಓಡಾಡುತ್ತಿರೋ ಚಿರತೆ ; ಭಯಭೀತರಾದ ಜನತೆ..!
ಚಿಕ್ಕೋಡಿಯಲ್ಲಿ ರಾಜಾರೋಷವಾಗಿ ರೈತರ ಜಮೀನಿನಲ್ಲಿ ಓಡಾಡುತ್ತಿರೋ ಚಿರತೆ ; ಭಯಭೀತರಾದ ಜನತೆ..!
ಕಳೆದ ಒಂದು ವಾರದ ಹಿಂದೆಯೇ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ಜನರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸದ್ಯ ಚಿರತೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದರೂ, ಚಿರತೆ ಬೋನಿಗೆ ಬೀಳದೆ ಜಮೀನಿಗಳಲ್ಲಿ ತಿರುಗುತ್ತಿದ್ದು, ಈ ಕೂಡಲೇ ಚಿರತೆ ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.