ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರ ಮೇಲೆ ಯಾವುದೇ ಕಾಳಜಿ ಇಲ್ಲ. ಅವರಿಗೆ ಮೀಸಲಾತಿ ತಂದಿರುವುದು ಕೇವಲ ಚುನಾವಣೆ ಉದ್ದೇಶಕ್ಕಾಗಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ವಿಧಾನಸಭೆಯಲ್ಲಿ ಎಸ್ಸಿ ಎಸ್‌ಟಿ ಮೀಸಲಾತಿ ವಿದಾಯಕ ಅನುಮೋದನೆಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಇಂದು ವಿಧಾನಸಭೆಯಲ್ಲಿ ಎಸ್ಸಿ- ಎಸ್‌ಟಿ ತಿದ್ದುಪಡಿ ವಿಧೇಯಕ ಅನುಮೋದನೆಗೊಂಡಿದೆ. ಎಸ್ ಸಿ ಸಮುದಾಯದವರಿಗೆ ಶೇಕಡ 15 ರಿಂದ 17ಕ್ಕೆ ಹಾಗೂ ಎಸ್‌ಟಿ ಸಮುದಾಯಕ್ಕೆ ಶೇಕಡ 3 ರಿಂದ 7ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ ಎಂದರು.
ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ಶೇಕಡ 24 ರಷ್ಟು ಮೀಸಲಾತಿ ಸಿಗಬೇಕು. ಈ ಪ್ರಸ್ತಾವವನ್ನು ನಾನು ಈ ಹಿಂದೆಯೇ ಮಾಡಿದ್ದು, ಚುನಾವಣೆ ಹಿನ್ನೆಲೆ ಪ್ರಸ್ತಾಪ ಮಾಡಿದ್ದೆ. ಈಗ ಬಿಜೆಪಿ ಸರ್ಕಾರ ಇದನ್ನು ಅನುಮೋದನೆಗೆ ತಂದಿದ್ದು, ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಒಂಬತ್ತನೇ ಶೆಡ್ಯೂಲ್ ಗೆ ಸೇರ್ಪಡೆ ಮಾಡಬೇಕಿತ್ತು, ಆದರೆ ಮಾಡಿಲ್ಲ. ಕೇಂದ್ರದ ಸಮಾಜ ಕಲ್ಯಾಣ ಇಲಾಖೆ ಕ್ಯಾಬಿನೆಟ್ ಹಾಗೂ ರಾಜ್ಯ ಖಾತೆಯ ಸಚಿವರುಗಳು ಈಗಾಗಲೇ ತಿಳಿಸಿದ್ದು, ಇಂದಿರಾ ಸಹನೆ ಪ್ರಕರಣದಲ್ಲಿ ಶೇಕಡ 50ಕ್ಕೆ ಫೀಲ್ ಮಾಡಲಾಗಿದ್ದು ಇದಕ್ಕಿಂತ ಹೆಚ್ಚು ಮಾಡುವ ಪ್ರಸ್ತಾಪ ನಮಗೆ ಬಂದಿಲ್ಲ ಎಂದಿದ್ದಾರೆ.