ಕರ್ನಾಟಕ

karnataka

ETV Bharat / state

ಹೋರಾಟದಿಂದ ಬಂದವರೇ ಲೀಡರ್​​: ಸತೀಶ್​ಗೆ ರಮೇಶ್​​ ಜಾರಕಿಹೊಳಿ ತಿರುಗೇಟು - ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ

ಹೋರಾಟದಲ್ಲಿ ಗೆದ್ದು ಬಂದವರೇ ನಿಜವಾದ ನಾಯಕರಾಗಲು ಸಾಧ್ಯ ಎಂದು ಸತೀಶ್​ ಜಾರಕಿಹೊಳಿಗೆ ಅನರ್ಹ ಶಾಸಕ ರಮೇಶ್​ ‌ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಅನರ್ಹ ಶಾಸಕ ರಮೇಶ ‌ಜಾರಕಿಹೊಳಿ

By

Published : Nov 9, 2019, 2:04 PM IST

ಬೆಳಗಾವಿ: ಹೋರಾಟದಲ್ಲಿ ಗೆದ್ದು ಬಂದವರೇ ನಿಜವಾದ ನಾಯಕರಾಗಲು ಸಾಧ್ಯ ಎಂದು ಸತೀಶ್​ ಜಾರಕಿಹೊಳಿಗೆ ಅನರ್ಹ ಶಾಸಕ ರಮೇಶ್​ ‌ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಹೋರಾಟದಿಂದ ಬಂದವರೇ ಲೀಡರ್: ರಮೇಶ್​ ಜಾರಕಿಹೊಳಿ

ಬೆಳಗಾವಿಯ ಸಾಂಬ್ರಾ ‌ವಿಮಾನ‌ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಹೋರಾಟದಲ್ಲಿ ನನಗೇನು ತೊಂದರೆಯಾಗುತ್ತಿಲ್ಲ. ಸರಳವಾಗಿ ಎಲ್ಲರೂ ನಾಯಕರಾಗಬಹುದು. ಆದರೆ ಯುದ್ಧದಲ್ಲಿ ಹೋರಾಡಿ‌ ಗೆದ್ದು ಬೀಗುವವರೇ ನಿಜವಾದ ಲೀಡರ್ ಎಂದರು. ಅನರ್ಹ ಶಾಸಕರ‌ ಕುರಿತಾಗಿ ಬುಧವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ತೀರ್ಪು ಬಂದ ಬಳಿಕ ನನ್ನ ರಾಜಕೀಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವೆ. ಸತೀಶ್​ ಜಾರಕಿಹೊಳಿ ಕಳೆದ 15 ವರ್ಷಗಳಿಂದ ಸುಮ್ಮನೆ ಕುಳಿತಿದ್ದರು. ಈಗ ಸ್ವಾರ್ಥಕ್ಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಗೋಕಾಕ್​ ಕ್ಷೇತ್ರದ ಜನತೆಯೇ ಅವರಿಗೆ ಉತ್ತರಿಸಲಿದ್ದಾರೆ ಎಂದರು.

ಇನ್ನು ಬೆಂಬಲಿಗರ ರಾಜೀನಾಮೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು‌ ಅನರ್ಹ ಶಾಸಕನಾಗಿದ್ದು, ಅವರ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ ಎಂದು‌ ಉತ್ತರಿಸಿದರು.

ABOUT THE AUTHOR

...view details