ಕರ್ನಾಟಕ

karnataka

ETV Bharat / state

ಬಿಜೆಪಿಗೆ ನನ್ನನ್ನೂ ಆಹ್ವಾನಿಸಿದ್ದರು: ಲಕ್ಷ್ಮೀ ಹೆಬ್ಬಾಳ್ಕರ್ ಸ್ಫೋಟಕ ಹೇಳಿಕೆ...! - Lakshmi Hebbalkar campaign in Sankonatti village

ಪ್ರವಾಹ ವೇಳೆ ನಮ್ಮ ಕ್ಷೇತ್ರದಲ್ಲಿ ನಾಲ್ಕು ಸಾವಿರ ಮನೆ ಬಿದ್ದಾಗ ನಾನು, ನನ್ನ ಮಗ, ತಮ್ಮ, ತಾಯಿ ಎಲ್ಲರೂ 44ದಿನ ಕೆಲಸ ಮಾಡಿದ್ದೇವೆ. ಆದರೆ ಮಹೇಶ್ ಕುಮಟಳ್ಳಿ ಬಾಂಬೆ ಪೈವ್​​ ಸ್ಟಾರ್ ಹೋಟೆಲ್​ನಲ್ಲಿ ವಾಸ್ತವ್ಯ ಮಾಡಿದ್ದರು ಎಂದು ಶಾಸಕಿ ಲಕ್ಷ್ಮೀ ಹೇಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್,  Laxmi Hebbalkar
ಲಕ್ಷ್ಮೀ ಹೆಬ್ಬಾಳ್ಕರ್

By

Published : Nov 28, 2019, 7:29 AM IST

ಅಥಣಿ: ಉಪಚುನಾವಣೆ ಹಿನ್ನೆಲೆ ಕೈ ಅಭ್ಯರ್ಥಿ ಪರವಾಗಿ ಸಂಕೋನಟ್ಟಿ ಗ್ರಾಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಬಿರುಸಿನ ಪ್ರಚಾರ ನಡೆಸಿದರು.

ಕಳೆದ ಪ್ರವಾಹದಲ್ಲಿ ನಮ್ಮ ಕ್ಷೇತ್ರದಲ್ಲಿ ನಾಲ್ಕು ಸಾವಿರ ಮನೆ ಬಿದ್ದಾಗ ನಾನು, ನನ್ನ ಮಗ, ತಮ್ಮ, ತಾಯಿ ಎಲ್ಲರೂ 44ದಿನ ಕೆಲಸ ಮಾಡಿದ್ದೇವೆ. ಆದರೆ ಮಹೇಶ್ ಕುಮಟಳ್ಳಿ ಬಾಂಬೆ ಪೈವ್​​ ಸ್ಟಾರ್ ಹೋಟೆಲ್​ನಲ್ಲಿ ವಾಸ್ತವ್ಯ ಮಾಡಿದ್ದರು ಎಂದು ಹರಿಹಾಯ್ದರು.

ಲಕ್ಷ್ಮೀ ಹೆಬ್ಬಾಳ್ಕರ್

ಕುಮಟಳ್ಳಿ, ಚುನಾವಣೆ ಆದ ಆರೇ ದಿನಕ್ಕೆ ಹೈದರಾಬಾದ್​ನಲ್ಲಿ ಸಭೆ ಸೇರಿ ಪಕ್ಷ ಬಿಡುವ ಯೋಚನೆ ಮಾಡಿದ್ದರು. ಬೆಳಗಾವಿಯಲ್ಲಿ ಒಬ್ಬ ದೊಡ್ಡ ಮನುಷ್ಯ ಸಭೆ ಕರೆದಿದ್ದರು. ನನ್ನನ್ನು ಕೂಡ ಕರೆದು ಬಿಜೆಪಿಗೆ ಹೋಗೋಣ ಎಂದರು ಎಂದು ಆಪರೇಷನ್​ ಕಲಮದ ಬಗ್ಗೆ ಹೇಳಿದರು.

ABOUT THE AUTHOR

...view details