ಅಥಣಿ: ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಇಂದು ಮುಂಜಾನೆ ದಿಢೀರ್ ಜಿಲ್ಲೆಯ ಅಥಣಿ ಪಟ್ಟಣದಲ್ಲಿನ ತಹಸೀಲ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಹಾಜರಾತಿ ಹಾಗೂ ಕಾರ್ಯಕ್ಷಮತೆಯ ಕುರಿತು ಪರಿಶೀಲನೆ ನಡೆಸಿದ್ದಾರೆ.
ತಹಸೀಲ್ ಕಚೇರಿಗೆ ಡಿಸಿಎಂ ಲಕ್ಷ್ಮಣ್ ಸವದಿ ಹಠಾತ್ ಭೇಟಿ, ಪರಿಶೀಲನೆ
ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಇಂದು ಮುಂಜಾನೆ ದಿಢೀರ್ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿನ ತಹಸೀಲ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಹಾಜರಾತಿ ಹಾಗೂ ಕಾರ್ಯಕ್ಷಮತೆಯ ಕುರಿತು ಪರಿಶೀಲನೆ ನಡೆಸಿದ್ದಾರೆ.
ಡಿಸಿಎಂ ಲಕ್ಷ್ಮಣ್ ಸವದಿ
ಈ ಸಂದರ್ಭದಲ್ಲಿ 17 ಜನ ಅಧಿಕಾರಿಗಳು ಗೈರು ಹಾಜರಾಗಿರುವುದು ಕಂಡುಬಂದಿದ್ದು, ಅವರ ಹಾಜರಾತಿ ಸ್ಥಳದಲ್ಲಿ ಗೈರುಹಾಜರು ಎಂದು ನಮೂದಿಸಿ ಸೀಲ್ಹಾಕಿ ಸೂಚನೆ ನೀಡಿದ ಅವರು, ಗೈರಾದವರ ಮೇಲೆ ಕ್ರಮ ಜರುಗಿಸಲು ಸೂಚನೆ ನೀಡಿದ್ದಾರೆ.
ಇಂದು ಮುಂಜಾನೆ 10:45 ಗಂಟೆಯಾದರೂ ಅಧಿಕಾರಿಗಳು ಆಗಮಿಸದೇ ಇದ್ದದ್ದು ಉಪ ಮುಖ್ಯಮಂತ್ರಿಗಳ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯುಂಟಾಗುತ್ತದೆ, ಮುಂದಿನ ದಿನದಲ್ಲಿ ಹಲವಾರು ಕಾರ್ಯ ಕಚೇರಿಗಳಿಗೆ ಧಿಡೀರ್ ಭೇಟಿ ನೀಡುವ ಮೂಲಕ ಚುರುಕು ಮುಟ್ಟಿಸಲಾಗುವುದು ಎಂದರು.