ಕರ್ನಾಟಕ

karnataka

ETV Bharat / state

ನಿಮ್ಮ ವೋಟಿನಿಂದ ಶ್ರೀಮಂತ ಪಾಟೀಲ್​​ ಮಂತ್ರಿಯಾಗುತ್ತಾರೆ: ಲಕ್ಷ್ಮಣ ಸವದಿ - ಶ್ರೀಮಂತ ಪಾಟೀಲ್ ಲೇಟೆಸ್ಟ್​ ನ್ಯೂಸ್

ಸಮ್ಮಿಶ್ರ ಸರ್ಕಾರ ಅಭಿವೃದ್ಧಿಯತ್ತ ಗಮನ ನೀಡಲಿಲ್ಲ. ಹೀಗಾಗಿ 17 ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ರು.

laxman savadi latest news,ಲಕ್ಷ್ಮಣ ಸವದಿ ಲೇಟೆಸ್ಟ್ ನ್ಯೂಸ್
ಲಕ್ಷ್ಮಣ ಸವದಿ, ಡಿಸಿಎಂ

By

Published : Nov 28, 2019, 11:32 PM IST

ಚಿಕ್ಕೋಡಿ: ನೀವು ಕೊಡುವ ಒಂದೊಂದು ಮತ ಶ್ರೀಮಂತ ಪಾಟೀಲ್​ ಅವರನ್ನ ಶಾಸಕರಾಗಿ ಅಷ್ಟೇ ಅಲ್ಲ ಒಬ್ಬ ಕ್ಯಾಬಿನೆಟ್ ಮಂತ್ರಿಯಗಿ ಮಾಡುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ರು.

ಲಕ್ಷ್ಮಣ ಸವದಿ, ಡಿಸಿಎಂ

ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಪರ ಮೋಳೆ ಗ್ರಾಮದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಿಂದ ಬೇಸತ್ತು 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಇದರ ಫಲವಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾದದು. ಸಿಎಂ ಆದ ಮೇಲೆ ಕಾಗವಾಡ ಕ್ಷೇತ್ರಕ್ಕೆ 108 ಕೋಟಿ ರೂ. ಅನುದಾನ ನೀಡಿದ್ದಾರೆ.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್ ಎಂದು ಪಕ್ಷ ನೋಡದೆ ಶಾಸಕರಾದವರು ಅಭಿವೃದ್ಧಿ ಕಡೆ ಗಮನ ನಿಡಬೇಕು. ಮುಖ್ಯಮಂತ್ರಿ ಆದವರೂ ಕೂಡಾ ಜಿಲ್ಲೆ, ತಾಲೂಕು ಎಂಬ ಭೇದ ಭಾವ ಮಾಡದೆ ಎಲ್ಲಾ ಮತಕ್ಷೇತ್ರಗಳ ಕಡೆಗೆ ಗಮನ ಹರಿಸಬೇಕು. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಈ ಕಾರ್ಯ ಆಗಿಲ್ಲ ಎಂದು ಸವದಿ ಆರೋಪಿಸಿದ್ರು.

ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವುದು ನನ್ನ ಹೊಣೆ. ಎಲ್ಲಾ ಕಾರ್ಯಕರ್ತರು ಇವರಿಬ್ಬರನ್ನು ಗೆಲ್ಲಿಸಿಕೊಡುವ ಕೆಲಸ ಮಾಡಬೇಕಿದೆ. ನೀವು ಕೊಡುವ ಒಂದೊಂದು ಮತ ಯಡಿಯೂರಪ್ಪ ಅವರು ಮೂರೂವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿರುವಂತೆ ಮಾಡುತ್ತದೆ. ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿ ಆಗಿರತ್ತಾರೆ ಎಂದರು.

ABOUT THE AUTHOR

...view details