ಕರ್ನಾಟಕ

karnataka

ETV Bharat / state

ಐಟಿ ದಾಳಿಯ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇಲ್ಲ: ಡಿಸಿಎಂ ಲಕ್ಷ್ಮಣ ಸವದಿ - ರಾಜಕೀಯ ಲೇಪನ

ಐಟಿ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ದಾಳಿ ಮಾಡುತ್ತಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇಲ್ಲ. ವಿರೋಧ ಪಕ್ಷಗಳು ರಾಜಕೀಯಕ್ಕಾಗಿ ಆರೋಪ ಮಾಡುತ್ತಿವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ

By

Published : Oct 13, 2019, 5:11 PM IST

ಬೆಳಗಾವಿ:ಐಟಿ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ದಾಳಿ ಮಾಡುತ್ತಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇಲ್ಲ. ವಿರೋಧ ಪಕ್ಷಗಳು ರಾಜಕೀಯಕ್ಕಾಗಿ ಆರೋಪ ಮಾಡುತ್ತಿವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ
ಇಂದು ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಯಾರು ತೆರಿಗೆ ಹಣ ಕಟ್ಟದೆ ಸರ್ಕಾರಕ್ಕೆ ಮೋಸ ಮಾಡಿರುತ್ತಾರೆ ಅಂತವರ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡುತ್ತಾರೆ. ಕೇವಲ ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಮಾತ್ರ ದಾಳಿಯಾಗಿಲ್ಲ. ಈ ಹಿಂದೆ ಬಿಜೆಪಿ ಮುಖಂಡರ ಮನೆ ಮೇಲೆ ದಾಳಿ ಆಗಿದ್ದವು. ಈ ವಿಚಾರಕ್ಕೆ ರಾಜಕೀಯ ಲೇಪನ ಮಾಡುವುದು ಬೇಡ ಎಂದಿದ್ದಾರೆ.

ಪರಮೇಶ್ವರ್ ಪಿಎ ಸಾವಿಗೆ ಐಟಿ ದಾಳಿ ಕಾರಣ ಅಲ್ಲ;

ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಪಿಎ ಸಾವಿಗೆ ಐಟಿ ದಾಳಿ ಕಾರಣ ಅಲ್ಲ. ಪರಮೇಶ್ವರ್ ಅವರೇ ಇದು ರಾಜಕೀಯ ದಾಳಿ ಅಲ್ಲ ಎಂದು ಹೇಳಿದ್ದಾರೆ. ಅವರ ಪಿಎ ಸಾವಿನ ತನಿಖೆ ಮಾಡಬೇಕೆಂದು ಕೋರಿದರೆ ಸರ್ಕಾರ ತನಿಖೆ ಮಾಡುತ್ತದೆ ಎಂದರು. ಇನ್ನು ಅಧಿವೇಶನದಿಂದ ಮಾಧ್ಯಮಗಳನ್ನು ಹೊರಗಿಟ್ಟ ವಿಚಾರವಾಗಿ, ಇದು ಸ್ಪೀಕರ್ ಅವರ ವೈಯಕ್ತಿಕ ತೀರ್ಮಾನ. ಅದನ್ನು ಪ್ರಶ್ನೆ ಮಾಡುವ ಹಕ್ಕು ನಮಗೆ ಇಲ್ಲ. ಉಳಿದಂತೆ ಸರ್ಕಾರಿ‌ ಕಾರ್ಯಕ್ರಮಗಳಿಗೆ ಮಾಧ್ಯಮ ನಿರಾಕರಣೆ ವಿಷಯ ತಿಳಿದಿಲ್ಲ ಎಂದರು.

ABOUT THE AUTHOR

...view details