ಕರ್ನಾಟಕ

karnataka

ETV Bharat / state

ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾದ ಲಕ್ಷ್ಮಣ ಸವದಿ ಕಟೌಟ್​​ - ಕಾಂಗ್ರೆಸ್ ಮುಖಂಡರು ಮಹೇಶ್ ಕುಮ್ಟಳ್ಳಿ ಅವರ ಕಾಲ್ ಎಳೆಯುತ್ತಿದ್ದಾರೆ

ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಡಿಸಿಎಂ ಲಕ್ಷ್ಮಣ ಸವದಿ ಅಥಣಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಅವರ ಅಭಿಮಾನಿಗಳು ಲಕ್ಷ್ಮಣ ಸವದಿ ಅವರ ಕಟೌಟ್ ನಿಲ್ಲಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Laxman Savadi cutout for discussion
ಚರ್ಚೆಗೆ ಗ್ರಾಸವಾದ ಲಕ್ಷ್ಮಣ್ ಸವದಿ ಕಟೌಟ್

By

Published : Feb 20, 2020, 6:30 PM IST

ಅಥಣಿ: ಡಿಸಿಎಂ ಲಕ್ಷ್ಮಣ ಸವದಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಅಥಣಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಅವರ ಅಭಿಮಾನಿಗಳು ಲಕ್ಷ್ಮಣ ಸವದಿ ಅವರ ಕಟೌಟ್ ನಿಲ್ಲಿಸಿದ್ದಾರೆ.

ಅಥಣಿಯ ಪ್ರಮುಖ ರಸ್ತೆಗಳಲ್ಲಿ ಅವರಿಗೆ ಸ್ವಾಗತ ಬಯಸುವ ನಿಟ್ಟಿನಲ್ಲಿ ಪೋಸ್ಟರ್ ಹಾಕಿ, ಅದರಲ್ಲಿ 'ಅಂತ್ಯವಲ್ಲ ಆರಂಭ' ಎಂದು ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಚರ್ಚೆಗೆ ಗ್ರಾಸವಾದ ಲಕ್ಷ್ಮಣ ಸವದಿ ಕಟೌಟ್

ಈ ಪೋಸ್ಟರ್​​ ಕಾಣುತ್ತಿದ್ದಂತೆ ಅಥಣಿ ಕಾಂಗ್ರೆಸ್ ಮುಖಂಡರು ಮಹೇಶ್ ಕುಮಟಳ್ಳಿ ಅವರ ಕಾಲೆಳೆಯುತ್ತಿದ್ದಾರೆ. ಮಹೇಶ್ ಅಣ್ಣ ಹುಷಾರು, ಡಿಸಿಎಂ ಲಕ್ಷ್ಮಣ ಸವದಿ ನಿಮಗೆ ಎಚ್ಚರಿಕೆ ನೀಡಿದ್ದಾರೆ ಎಂದು ಅಥಣಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಿಚಾಯಿಸುತ್ತಿದ್ದಾರೆ.

ABOUT THE AUTHOR

...view details