ಬೆಳಗಾವಿ: ಇಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿದೆ. ಈ ವೇಳೆ ಮತದಾನ ಕೇಂದ್ರಕ್ಕೆ ಗುಂಪು ಗುಂಪಾಗಿ ಬೆಂಬಲಿಗರು ದೌಡಾಯಿಸಿದ ಕಾರಣಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾ.ಪಂ. ಚುನಾವಣೆ : ಗುಂಪು ಗುಂಪಾಗಿ ಆಗಮಿಸಿದವರ ಮೇಲೆ ಲಘು ಲಾಠಿ ಪ್ರಹಾರ - belagavi Hirebagavewadi
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಮತದಾನ ಕೇಂದ್ರಕ್ಕೆ ಅಭ್ಯರ್ಥಿಗಳ ಬೆಂಬಲಿಗರು ಗುಂಪು ಗುಂಪಾಗಿ ಆಗಮಿಸಿದ್ದು, ಹೊರ ಹೋಗಿ ಎಂದರೂ ಕೇಳದ ಹಿನ್ನೆಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಲಘು ಲಾಠಿ ಪ್ರಹಾರ
ಮತದಾನ ಕೇಂದ್ರಕ್ಕೆ ಅಭ್ಯರ್ಥಿಗಳ ಬೆಂಬಲಿಗರು ಗುಂಪು ಗುಂಪಾಗಿ ಆಗಮಿಸಿದ್ದರು. ಹೊರ ಹೋಗಿ ಎಂದರೂ ಕೇಳದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಲಾಠಿ ಬೀಸಿದರು. ಪೊಲೀಸರ ಲಾಠಿ ರುಚಿಗೆ ಬೆದರಿದ ಜನರು ಸ್ಥಳದಿಂದ ಕಾಲ್ಕಿತ್ತು ಓಡಿದ್ದಾರೆ.