ಬೆಳಗಾವಿ: ಭಾಷಾ ರಾಜಕಾರಣಕ್ಕೆ ಮತದಾರರು ತಿಲಾಂಜಲಿ ಹಾಡಿದ್ದಾರೆ. ಅಭಿವೃದ್ಧಿಪರ ಕೆಲಸಕ್ಕಾಗಿ ಮತದಾರರು ಬಿಜೆಪಿ ಪಕ್ಷದ ಕೈಹಿಡಿದಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಬೆಳಗಾವಿ ನಗರ ಪಾಲಿಕೆ ಚುನಾವಣೆ ದಾಖಲೆ ಸೃಷ್ಟಿ ಮಾಡಿದೆ. ಸ್ವಾತಂತ್ರ್ಯ ಸಿಕ್ಕು 70 ವರ್ಷಗಳಿಂದಲೂ ಬೆಳಗಾವಿಯಲ್ಲಿ ಭಾಷಾ ಪ್ರಾಂತ್ಯದ ಮೇಲೆ ಚುನಾವಣೆ ನಡೆದಿರುವ ಉದಾಹರಣೆ ಇದೆ. ಆದ್ರೆ, ಈ ಬಾರಿ ಅಭಿವೃದ್ಧಿಪರವಾಗಿ ಜನರು ಮತದಾನ ಮಾಡಿದ್ದಕ್ಕಾಗಿಯೇ ಭಾರತೀಯ ಜನತಾ ಪಾರ್ಟಿಗೆ ಅತಿ ಹೆಚ್ಚು ಸ್ಥಾನ ಸಿಕ್ಕಿವೆ ಎಂದರು.
ಭಾಷಾ ಪ್ರಾಂತ್ಯದ ಮೇಲೆ ನಡೆಯುತ್ತಿದ್ದ ಮತದಾನಕ್ಕೆ ಜನರು ತಿಲಾಂಜಲಿ ಹಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಭಾಷಾವಾರು ಚುನಾವಣೆಗೆ ಅವಕಾಶ ನೀಡಲ್ಲ ಎಂದ್ರು. ಮುಂದಿನ ದಿನಗಳಲ್ಲಿ ಬುಡಾ, ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ಸಮನ್ವಯದ ಕೆಲಸ ಮಾಡಲಿದ್ದಾರೆ. ಬರುವ ಐದು ವರ್ಷಗಳ ಅವಧಿಯಲ್ಲಿ ಬೆಳಗಾವಿ ಚಿತ್ರಣ ಬದಲಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತದೆ ಎಂದರು.
ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿ ಹೊತ್ತಿದ್ದ ಬಿಜೆಪಿ ಶಾಸಕ ಅಭಯ ಪಾಟೀಲ್ ಮಾತನಾಡಿ, ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ 25 ಕ್ಷೇತ್ರಗಳ ಪೈಕಿ 22ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಎಂಇಎಸ್ ಒಂದು, ಎರಡು ಕಾಂಗ್ರೆಸ್ ಅಭ್ಯರ್ಥಿಗಳು ಗೆದಿದ್ದಾರೆ.