ಕರ್ನಾಟಕ

karnataka

ETV Bharat / state

ಈ ಹಿಂದೆ ನನ್ನ ಕಡೆಯಿಂದ ಲಕ್ಷ್ಮಿ ಹೆಬ್ಬಾಳ್ಕರ್​ 50 ಸಾವಿರ ಹಣ ಪಡೆದಿದ್ದರು: ಸಂಜಯ್ ಪಾಟೀಲ್

ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಂದು ಗೋಮಟೇಶ್ ವಿದ್ಯಾಪೀಠದ ನನ್ನ ಕಚೇರಿಗೆ ಬಂದು 50 ಸಾವಿರ ರೂ. ಸಹಾಯ ಮಾಡಿ ಎಂದು ಕೇಳಿದ್ದರು ಎಂದು ಬಿಜೆಪಿ ಮಾಜಿ ಶಾಸಕ ಸಂಜಯ್​ ಪಾಟೀಲ್​ ಹೇಳಿದ್ದಾರೆ

lakshmi-hebbalkar-received-50-thousand-from-me-sanjay-patil
ನನ್ನ ಕಡೆಯಿಂದ ಲಕ್ಷ್ಮಿ ಹೆಬ್ಬಾಳ್ಕರ್​ 50 ಸಾವಿರ ಹಣವನ್ನು ಪಡೆದಿದ್ದಾರೆ: ಸಂಜಯ್ ಪಾಟೀಲ್

By

Published : Mar 4, 2023, 5:46 PM IST

Updated : Mar 4, 2023, 5:57 PM IST

ನನ್ನ ಕಡೆಯಿಂದ ಲಕ್ಷ್ಮಿ ಹೆಬ್ಬಾಳ್ಕರ್​ 50 ಸಾವಿರ ಹಣ ಪಡೆದಿದ್ದಾರೆ: ಸಂಜಯ್ ಪಾಟೀಲ್

ಬೆಳಗಾವಿ : 20 ವರ್ಷಗಳ ಹಿಂದೆ ನನ್ನ ಬಳಿಯಿಂದ 50 ಸಾವಿರ ರೂ. ಸಾಲ ತಗೆದುಕೊಂಡು ಹೋಗಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಈವರೆಗೂ ವಾಪಸ್ ನೀಡಿಲ್ಲ. ಈಗ ಕೋಟ್ಯಂತರ ರೂ ಹಣ ಮಾಡಿದ್ದು ಹೇಗೆ ಎಂದು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಪ್ರಶ್ನಿಸಿದ್ದಾರೆ. ಸಂಜಯ್ ಪಾಟೀಲ್ ಅವರು ರಾಜಹಂಸಗಡ ಕೋಟೆ ಬಳಿಯ ಮಣ್ಣು ಮಾರಿದ್ದಾರೆ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಕ್ಕೆ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಹೆಬ್ಬಾಳ್ಕರ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಏನಾದರೂ ದಾಖಲೆ ಕೊಟ್ಟರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು.

20 ವರ್ಷಗಳ ಹಿಂದೆ ನಾನು ರಾಜಕೀಯದಲ್ಲಿ ಇರಲಿಲ್ಲ. ಅವರೂ ಸಹ ಸಕ್ರಿಯ ರಾಜಕಾರಣದಲ್ಲಿ ಇರಲಿಲ್ಲ. ಅಂದು ಗೋಮಟೇಶ್ ವಿದ್ಯಾಪೀಠದ ನನ್ನ ಕಚೇರಿಗೆ ಬಂದಿದ್ದರು. ಆಗ 50 ಸಾವಿರ ರೂ. ಸಹಾಯ ಮಾಡಿ ಎಂದು ಕೇಳಿ ಹೋಗಿದ್ದರು. ಆ ಸಮಯ ನನ್ನಿಂದ 50 ಸಾವಿರ ರೂ. ತೆಗೆದುಕೊಂಡು ಹೋದವರು ಅಂದಿನಿಂದ ಇಂದಿನ ವರೆಗೂ ವಾಪಾಸ್ ಬರಲೇ ಇಲ್ಲ ಎಂದು ಆರೋಪಿಸಿದರು.

ಮಣ್ಣು ಮಾರುವಂತಹ ಬಡತನ ಬಂದಿಲ್ಲ : ಅಂದು ನನ್ನ ಕಡೆಯಿಂದ 50 ಸಾವಿರ ರೂ. ಸಾಲ ತೆಗೆದುಕೊಂಡು ಹೋಗುವಂತಹ ಸ್ಥಿತಿಯಲ್ಲಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಈಗ 500 ಕೋಟಿ ರೂ. ಮಾಲೀಕರು ಹೇಗೆ ಆಗ್ತಾರೆ? ಅವತ್ತೇ ಸಂಜಯ್ ಪಾಟೀಲ್ ನಿಮಗೆ 50 ಸಾವಿರ ರೂ. ಸಾಲ ಕೊಟ್ಟಿದ್ದಾರೆ. ಅವನಿಗೆ ದುಡ್ಡಿನ ಅವಶ್ಯಕತೆ ಇಲ್ಲ. ಮಣ್ಣು ಮಾರುವಂತಹ ಬಡತನ ಬಂದಿಲ್ಲ. ಸಂಜಯ್ ಪಾಟೀಲ್‌ಗೆ ಕೊಂಡುಕೊಳ್ಳುವಷ್ಟು ಶಕ್ತಿ ಇದೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಹಿಂದಿದ್ದವರು ಮನೆ ಸೇರಿದ್ದಾರೆ: ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್​​​​

ನಾನು ಲಕ್ಷ್ಮಿ ಪುತ್ರ ಎಂಬುದು ನನಗೆ ಗೊತ್ತಿದೆ: ಅಕ್ರಮವಾಗಿ ಬ್ಯುಸಿನೆಸ್ ಮಾಡುವಂತಹ ಅನಿವಾರ್ಯ ನನಗಿಲ್ಲ, ನಾನು ಲಕ್ಷ್ಮಿ ಪುತ್ರ ಎಂಬುದು ನನಗೆ ಗೊತ್ತಿದೆ. ದುಡ್ಡಿನ ಸಲುವಾಗಿ ಸಗಣಿ ತಿನ್ನುವಂತಹ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ತಿರುಗೇಟು ನೀಡಿದರು. ಮಣ್ಣು ಮಾರಿ ದುಡ್ಡು ಮಾಡಬೇಕೆಂಬ ಸಲುವಾಗಿ ರಾಜಹಂಸಗಡ ಕೆಲಸ ಪ್ರಾರಂಭ ಮಾಡಿಲ್ಲ, ಛತ್ರಪತಿ ಶಿವಾಜಿ ಮಹಾರಾಜರನ್ನು ದೇವರ ಹಾಗೇ ಪೂಜೆ ಮಾಡುತ್ತೇನೆ, ಅದಕ್ಕಾಗಿ ಅವರ ಸ್ಮಾರಕ ನಿರ್ಮಾಣಕ್ಕಾಗಿ ಆ ಕೆಲಸವನ್ನು ಪ್ರಾರಂಭಿಸುತ್ತೇನೆ ಎಂದು ಹೇಳಿದರು.

ಪುತ್ಥಳಿ ಉದ್ಘಾಟನೆ ಮಾಡುವುದಕ್ಕೆ ನಾಚಿಕೆ ಆಗಲ್ವ : ಇತ್ತೀಚಿಗೆ ನಡೆದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ‘‘ನನ್ನ ಅನುದಾನದ ನಿರ್ಮಾಣದಲ್ಲಿ ರಾಜಹಂಸಗಡ ಶಿವಾಜಿ ಮಹಾರಾಜರ ಪುತ್ಥಳಿ ಉದ್ಘಾಟನೆ ಮಾಡುವುದಕ್ಕೆ ನಾಚಿಕೆ ಆಗಲ್ವ’’ ಎಂದು ಲಕ್ಷ್ಮೀ ಹೆಬ್ಬಾಳ್ಕರ್​​​ ಅವರು ಮಾಜಿ ಬಿಜೆಪಿ ಶಾಸಕ ಸಂಜಯ್​ ಪಾಟೀಲ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಬಿಜೆಪಿಯತ್ತ ಸಂಸದೆ ಸುಮಲತಾ?: ಎಸ್ಎಂ ಕೃಷ್ಣ ಭೇಟಿಯಾದ ಸಂಸದೆ ಸುಮಲತಾ

Last Updated : Mar 4, 2023, 5:57 PM IST

ABOUT THE AUTHOR

...view details