ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಳಗಾವಿ:ವೀರ ಸಾವರ್ಕರ್ರನ್ನು ಟಿಪ್ಪು ಸುಲ್ತಾನ್ಗೆ ಹೋಲಿಕೆ ಮಾಡುವುದು ಸರಿಯಲ್ಲ. ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದ್ದಾರೆ. ಸುಮಾರು 20 ವರ್ಷಗಳ ಕಾಲ ಜೈಲಿನಲ್ಲಿದ್ದು, ಕಠಿಣ ಶಿಕ್ಷೆ ಅನುಭವಿಸಿದ್ದಾರೆ. ಆದ್ರೆ ಟಿಪ್ಪು ಸುಲ್ತಾನ್ ಹಿಂದೂಗಳನ್ನು ಕೊಲೆ ಮಾಡಿದ್ದಾರೆಂದು ಬೆಳಗಾವಿಯ ಖಾಸಗಿ ಹೋಟೆಲ್‌ನ ಆವರಣದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ದೂರಿದರು.
ಸಾವರ್ಕರ್ ಭಾವಚಿತ್ರಕ್ಕೆ ಕಾಂಗ್ರೆಸ್ ಪಕ್ಷ ಮೃದು ಧೋರಣೆ ತೋರಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುದ್ಧಿ ಕಲಿತಂತೆ ತೋರ್ತಿದೆ. ರಾಹುಲ್ ಗಾಂಧಿಯೂ ಸಹ ಬುದ್ಧಿ ಕಲಿಯುವಂತಾಗಲಿ ಎಂದು ಹೇಳಿದರು.
ರಾಜಕೀಯ ದುರುದ್ದೇಶ ಇಲ್ಲ:ಸಿಬಿಐ, ಇಡಿ ಇವೆಲ್ಲಾ ಸ್ವತಂತ್ರವಾಗಿರುವ ಸಂಸ್ಥೆಗಳಾಗಿವೆ. ಯಾರ ಮೇಲೆ ಭ್ರಷ್ಟಚಾರದ ಆರೋಪ ಇರುತ್ತದೆಯೋ, ಅಂತಹವರನ್ನು ಅವರು ತನಿಖೆ ಮಾಡ್ತಾರೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಗಡಿ ವಿಚಾರದಲ್ಲಿ ರಾಜಕಾರಣ:ಗಡಿ ವಿಚಾರ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿದೆ. ಚುನಾವಣೆ ಬಂದಿದೆ ಎಂದು ಗಡಿ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿ ಅಲ್ಲ. ಮಹಾಜನ್ ವರದಿಯಲ್ಲಿ ಅವೆಲ್ಲಾ ಕರ್ನಾಟಕಕ್ಕೆ ಸೇರಿದ್ದು ಎಂದಿದೆ. ಮಹಾರಾಷ್ಟ್ರದವರು ಮಹಾಜನ್ ವರದಿಯನ್ನೇ ಒಪ್ಪಲಿಲ್ಲ ಅಂದ್ರೆ ಏನು ಮಾಡೋಕೆ ಆಗುತ್ತೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದರು.
ಸಿಎಂ ಕಡೆಯಿಂದ ಸಕಾರಾತ್ಮಕ ನಿಲುವು:ಪಂಚಮಸಾಲಿ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿ, ಸಿಎಂ ಬೊಮ್ಮಾಯಿ ಅವರು 22 ರಂದು ಸಕಾರಾತ್ಮಕ ನಿರ್ಣಯ ನೀಡಲಿದ್ದಾರೆಂದು ನನಗೆ ನಂಬಿಕೆ ಇದೆ. ಪಂಚಮಸಾಲಿ ಹೋರಾಟಕ್ಕೆ ಸಿಎಂ ಕಡೆಯಿಂದ ಸ್ಪಷ್ಟ ನಿಲುವು ಸಿಗಲಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಪಂಚಮಸಾಲಿ ಹೋರಾಟದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆ ವ್ಯಕ್ತಿ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ. ಅವನ ಬಗ್ಗೆ ಮಾತನಾಡಿದ್ರೆ ನಾವೇ ಸಣ್ಣವರಾಗ್ತೇವೆ. ಆತ ಒಬ್ಬ ಪೇಮೆಂಟ್ ಗಿರಾಕಿ. ಆದ್ರೆ ಅವರನ್ನು ವೇದಿಕೆ ಮೇಲೆ ಕೂರಿಸೋದಿಲ್ಲ. ಪಂಚಮಸಾಲಿ ಮೀಸಲಾತಿ ಸಿಗಬಾರದೆಂದು ಅವರೆಲ್ಲಾ ಹೋರಾಟ ಮಾಡ್ತಿದ್ದಾರೆ. ಬೇಕಾದ್ರೆ ಕೆಳಗಡೆ ಬಂದು ಕುಳಿತುಕೊಳ್ಳಲಿ ಎಂದು ವಚನಾನಂದ ಸ್ವಾಮೀಜಿ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ:ನಾನು ಸಿಎಂ ಆದ್ರೆ ಒಬ್ರನ್ನು ಜೈಲಿಗೆ, ಮತ್ತೊಬ್ರನ್ನು ಕಾಡಿಗೆ ಕಳುಹಿಸುವೆ: ಯತ್ನಾಳ್