ಬೆಳಗಾವಿ: ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಲ್ಲಿನ ಕುವೆಂಪು ನಗರದಲ್ಲಿರುವ ತಮ್ಮ ಮನೆಯಲ್ಲಿಯೇ ಸ್ವಯಂ ಕ್ವಾರಂಟೈನ್ನಲ್ಲಿದ್ದಾರೆ.
ನಾ ಇದ್ದಲ್ಲಿ ಬರಬೇಡಿ, ನೀವಿದ್ದಲ್ಲಿಗೇ ನಾ ಬರುತ್ತೇನೆ.. ಸ್ವಯಂ ಕ್ವಾರಂಟೈನ್ನಲ್ಲಿ ಶಾಸಕಿ ಹೆಬ್ಬಾಳ್ಕರ್.. - Lakshmi Hebbalkar
ನಾನಿದ್ದಲ್ಲಿ ಬರುವುದು ಬೇಡ. ಇದರಿಂದ ನಿಮಗೆ ತೊಂದರೆಯಾಗಬಹುದು. ನೀವು ನಿಮ್ಮ ಮನೆಯಲ್ಲೇ ಇರಿ. ನಿಮ್ಮ ಗ್ರಾಮಗಳಿಗೆ ನಾನೇ ಬರುತ್ತೇನೆ. ನಿಮ್ಮ ಸಮಸ್ಯೆ ಆಲಿಸುತ್ತೇನೆ. ಸಮಸ್ಯೆಗಳಿದ್ದಲ್ಲಿ ಫೋನ್ ಮಾಡಿದರೂ ಸ್ಪಂದಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿನಂತಿಸಿದ್ದಾರೆ.
ಲಾಕ್ಡೌನ್ ಅವಧಿಯಲ್ಲೂ ಕ್ಷೇತ್ರದ ಜನತೆ ಶಾಸಕಿ ಲಕ್ಷ್ಮಿ ಅವರನ್ನು ಭೇಟಿಯಾಗಲು, ಅಹವಾಲು ಸಲ್ಲಿಸಲು ಬರುತ್ತಿದ್ದರು. ಇದು ಅಕ್ಕಪಕ್ಕದ ನಿವಾಸಿಗಳಲ್ಲಿ ಭಯ, ಆತಂಕ ಮೂಡಿಸಿತ್ತು. ಕೆಲವರು ಇದರ ಬಗ್ಗೆ ಶಾಸಕಿಯವರ ಗಮನಕ್ಕೂ ತಂದಿದ್ದರು. ಜನರ ಭೇಟಿ ತಡೆಯುವ ಉದ್ದೇಶದಿಂದ ಹೆಬ್ಬಾಳ್ಕರ್ ಅವರೇ ಸ್ವತಃ ಪೊಲೀಸರಿಗೆ ವಿನಂತಿಸಿಕೊಂಡು, ಮನೆಗೆ ಸಂಪರ್ಕ ಕಲ್ಪಿಸುವ ಎಲ್ಲ ದಾರಿಗಳಿಗೆ ಬ್ಯಾರಿಕೇಡ್ ಹಾಕಿಸಿ, ಬಂದ್ ಮಾಡಿಸಿದ್ದಾರೆ. ತಾವೇ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ನಾನಿದ್ದಲ್ಲಿ ಬರುವುದು ಬೇಡ. ಇದರಿಂದ ನಿಮಗೆ ತೊಂದರೆಯಾಗಬಹುದು. ನೀವು ನಿಮ್ಮ ಮನೆಯಲ್ಲೇ ಇರಿ. ನಿಮ್ಮ ಗ್ರಾಮಗಳಿಗೆ ನಾನೇ ಬರುತ್ತೇನೆ. ನಿಮ್ಮ ಸಮಸ್ಯೆಯನ್ನು ಆಲಿಸುತ್ತೇನೆ. ಸಮಸ್ಯೆಗಳಿದ್ದಲ್ಲಿ ಫೋನ್ ಮಾಡಿದರೂ ಸ್ಪಂದಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಕ್ಷೇತ್ರದ ಜನರಲ್ಲಿ ವಿನಂತಿಸಿದ್ದಾರೆ.