ಕರ್ನಾಟಕ

karnataka

ETV Bharat / state

ಅಗ್ನಿ ಅವಘಡ: ಮನೆ ಕಳೆದುಕೊಂಡ ಸಂತ್ರಸ್ತರ ನೆರವಿಗೆ ಬಂದ್ರು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​​​​​ - ಮನೆ ಕಳೆದುಕೊಂಡ ಸಂತ್ರಸ್ತರ ನೆರವಿಗೆ ತುರ್ತಾಗಿ ಬಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​​​.

ಆಕಸ್ಮಿಕ ಬೆಂಕಿ ದುರಂತದಿಂದ ಹಿರೇಬಾಗೇವಾಡಿ ಗ್ರಾಮದಲ್ಲಿ ನಾಲ್ಕು ಮನೆಗಳು ಸುಟ್ಟುಹೋಗಿದ್ದು,ಸಂತ್ರಸ್ತರ ಸಂಕಷ್ಟ ಕಂಡ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕ​ರ್ ಸಮಸ್ಯೆಗೆ ಸ್ಫಂದಿಸಿದ್ದಾರೆ.

lakshmi Hebbalkar
ಮನೆ ಕಳೆದುಕೊಂಡ ಸಂತ್ರಸ್ತರ ನೆರವಿಗೆ ತುರ್ತಾಗಿ ಬಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

By

Published : Mar 17, 2020, 4:52 AM IST

ಬೆಳಗಾವಿ :ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅನಾಹುತದಿಂದ ನಾಲ್ಕು ಮನೆಗಳು ಸುಟ್ಟುಹೋಗಿದ್ದು, ಸಂತ್ರಸ್ತರ ಕಣ್ಣೀರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕ​ರ್ ತುರ್ತಾಗಿ ಸ್ಪಂದಿಸಿದ್ದಾರೆ.

ಬೆಂಕಿ ಆಕಸ್ಮಿಕದಿಂದಾಗಿ ಕುಟುಂಬಗಳು ತಮ್ಮ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಧವಸ, ಧಾನ್ಯ, ಕಾಗದಪತ್ರ ಸೇರಿದಂತೆ ಎಲ್ಲವೂ ಬೆಂಕಿಗೆ ಆಹುತಿಯಾಗಿದೆ. ಸಂತ್ರಸ್ತರ ಸಂಕಷ್ಟ ಕಂಡ ಲಕ್ಷ್ಮಿ ಹೆಬ್ಬಾಳ್ಕ​ರ್ ತಮ್ಮೆಲ್ಲ ಕೆಲಸಗಳನ್ನು ಬಿಟ್ಟು ಸ್ಥಳಕ್ಕೆ ಧಾವಿಸಿದರು. ಅವರನ್ನೆಲ್ಲ ಸಂತೈಸಿದ ಶಾಸಕರು, ತಮ್ಮಿಂದಾದ ರೀತಿಯಲ್ಲಿ ಆರ್ಥಿಕ ಸಹಾಯವನ್ನು ನೀಡಿದರು.

ಮನೆ ಕಳೆದುಕೊಂಡ ಸಂತ್ರಸ್ತರ ನೆರವಿಗೆ ತುರ್ತಾಗಿ ಬಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಅವರ ಪರಿಸ್ಥಿತಿ ಕಂಡು ತೀವ್ರ ನೋವಾಗಿದೆ. ಸರ್ಕಾರದಿಂದ ಶೀಘ್ರವಾಗಿ ಎಲ್ಲಾ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಡಲು ಬದ್ದನಾಗಿದ್ದೇನೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details