ಬೆಳಗಾವಿ:ದೇಶಾದ್ಯಂತ ಜನತಾ ಕರ್ಫ್ಯೂ ಹಿನ್ನೆಲೆ ಇಡೀ ದೇಶವೇ ಸ್ತಬ್ಧವಾಗಿರುವಾಗ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜನತಾ ಕರ್ಫ್ಯೂ ಉಲ್ಲಂಘಿಸಿ ತಮ್ಮ ಪುತ್ರನ ನಿಶ್ಚಿತಾರ್ಥ ಕಾರ್ಯ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.
ಜನತಾ ಕರ್ಫ್ಯೂ ಇದ್ದರೂ ಪುತ್ರನ ನಿಶ್ಚಿತಾರ್ಥ ನೆರವೇರಿಸಿದ್ರಾ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್? - ಮೃನಾಲ್ ಹೆಬ್ಬಾಳ್ಕರ್ನ ನಿಶ್ಚಿತಾರ್ಥ
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜನತಾ ಕರ್ಪ್ಯೂ ಉಲ್ಲಂಘಿಸಿ ತಮ್ಮ ಪುತ್ರನ ನಿಶ್ಚಿತಾರ್ಥ ಕಾರ್ಯ ಮಾಡಿದ್ದಾರೆ. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ ಅವರ ಪುತ್ರಿ ಜೊತೆ ನಿಶ್ಚಿತಾರ್ಥ ಕಾರ್ಯಕ್ರಮ ಮಾಡಿದ್ದಾರೆ ಎನ್ನಲಾಗುತ್ತಿದೆ.
ಲಕ್ಷ್ಮೀ ಹೆಬ್ಬಾಳ್ಕರ್
ಇಲ್ಲಿನ ಕುವೆಂಪು ನಗರದ ನಿವಾಸದ ಬಳಿ ಪುತ್ರ ಮೃನಾಲ್ ಹೆಬ್ಬಾಳ್ಕರ್ ಅವರ ನಿಶ್ಚಿತಾರ್ಥ ಕಾರ್ಯವನ್ನು ಮಾಡಿದ್ದಾರೆ. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ ಪುತ್ರಿ ಜೊತೆಗೆ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿಸಿದ್ದಾರೆ ಎನ್ನಲಾಗ್ತಿದೆ.
ನಿಶ್ಚಿತಾರ್ಥ ಕಾರ್ಯ ಪೂರ್ವ ನಿಗದಿ ಆಗಿತ್ತಂತೆ. ಹೀಗಾಗಿ ಪುತ್ರನ ನಿಶ್ಚಿತಾರ್ಥ ಕಾರ್ಯಕ್ರಮ ಇಂದು ಆಯೋಜಿಸಿದ್ದಾರೆ. ಅವರ ನಿವಾಸ ಮುಂಭಾಗದಲ್ಲಿ ಪೆಂಡಾಲ್ ಹಾಕಿ ಕಾರ್ಯಕ್ರಮ ಮಾಡಿದ್ದು, ಕುಟುಂಬ ಸದಸ್ಯರು ಸೇರಿ ಆಪ್ತರಿಗೆ ಮಾತ್ರ ಆಹ್ವಾನವನ್ನು ಹೆಬ್ಬಾಳ್ಕರ್ ನೀಡಿದ್ದರು. ನೂರಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.