ಕರ್ನಾಟಕ

karnataka

ETV Bharat / state

ಲಕ್ಷ್ಮಿ ಹೆಬ್ಬಾಳ್ಕರ್- ವೀಣಾ ಕಾಶಪ್ಪನವರ್ ಪಂಚಮಸಾಲಿ ಸಮಾಜದ ಬೆಂಕಿ ಚೆಂಡು: ನಿರಾಣಿ - Belgaum Lingayata Panchamasaali News

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಪ್ರತಿಭಟನಾ ವೇದಿಕೆಯಲ್ಲಿ ಭಾಷಣ ಮಾಡಿದ ಅವರು, ಎಷ್ಟೇ ಕಷ್ಟ ಆದರೂ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಪ್ರವರ್ಗ 2ಎಗೆ ಸೇರ್ಪಡೆ ಮಾಡಲು ಎಲ್ಲರೂ ಒಗ್ಗೂಡಿ ಪ್ರಯತ್ನಿಸೋಣ ಎಂದು ಮಾಜಿ‌ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಿರಾಣಿ
ನಿರಾಣಿ

By

Published : Oct 28, 2020, 9:20 PM IST

ಬೆಳಗಾವಿ:ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸೇರ್ಪಡೆ ಎಲ್ಲರ ಕನಸು. ಹೀಗಾಗಿ ಇದರಲ್ಲಿ ರಾಜಕೀಯ ಬೇಡ, ಪಕ್ಷಾತೀತವಾಗಿ ಬೇಡಿಕೆ ಈಡೇರಿಕೆಗೆ ನಾವೆಲ್ಲರೂ ಹೋರಾಟ ಮಾಡೋಣ ಎಂದು ಮಾಜಿ‌ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಪ್ರತಿಭಟನಾ ವೇದಿಕೆಯಲ್ಲಿ ಭಾಷಣ ಮಾಡಿದ ಅವರು, ಎಷ್ಟೇ ಕಷ್ಟ ಆದರೂ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಪ್ರವರ್ಗ 2ಎಗೆ ಸೇರ್ಪಡೆ ಮಾಡಲು ಎಲ್ಲರೂ ಒಗ್ಗೂಡಿ ಪ್ರಯತ್ನಿಸೋಣ ಎಂದರು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ವೀಣಾ ಕಾಶಪ್ಪನವರ್ ನಮ್ಮ ಸಮಾಜದ ಬೆಂಕಿ ಚೆಂಡು ಎಂದು ಇಬ್ಬರನ್ನೂ ಕರೆಯುತ್ತೇವೆ. ಆದರೆ, ಲಕ್ಷ್ಮಿ ಅಕ್ಕ ಗುಡುಗಿದ್ರು ನಾನು ಅವರಿಗೆ ಕೌಂಟರ್ ಆಗಿ ಏನೂ ಹೇಳಲ್ಲ. ಪಂಚಮಸಾಲಿ ಸಮಾಜ 2ಎ ಸೇರ್ಪಡೆ ಎಲ್ಲರ ಕನಸು ಹೀಗಾಗಿ ರಾಜಕೀಯ ಮಾಡದೇ ಪಕ್ಷಾತೀತವಾಗಿ ಮೀಸಲಾತಿಗಾಗಿ ಹೋರಾಟ ಮಾಡಬೇಕಿದೆ. ಎಷ್ಟೇ ಕಷ್ಟ ಆದರೂ ಪಂಚಮಸಾಲಿ ಲಿಂಗಾಯತ ಸಮಾಜ ಪ್ರವರ್ಗ 2ಎಗೆ ಸೇರ್ಪಡೆ ಮಾಡಿಯೇ ಮಾಡ್ತೀವಿ ಎಂದರು.

ಉಪವಾಸ ಸತ್ಯಾಗ್ರಹ ಪ್ರತಿಭಟನಾ ವೇದಿಕೆಯಲ್ಲಿ ಭಾಷಣ ಮಾಡಿದ ನಿರಾಣಿ

ಆಕಾಶ ಕಡೆ ಕೈ ನೋಡದೇ ಭೂಮಿ ಕಡೆ ಕೈ ನೋಡುವ ಸಮಾಜ ಪಂಚಮಸಾಲಿ ಸಮಾಜ. ನಮ್ಮ ಸಮಾಜದಲ್ಲಿ ನೂರಕ್ಕೆ 90ಕ್ಕಿಂತ ಹೆಚ್ಚು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ನಮ್ಮ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದೆ. ಇಡೀ ದೇಶಕ್ಕೆ ಅನ್ನ ಹಾಕುವ ಕುಟುಂಬ ಪಂಚಮಸಾಲಿ ಸಮಾಜ ಎಂದರು.

ಲಿಂಗಾಯತ ಪಂಚಮಸಾಲಿ ಸಮುದಾಯದ ಅನುಕೂಲಕ್ಕಾಗಿ ಎಲ್ಲ ಹಿರಿಯರು ಸೇರಿ ಎರಡು ಪೀಠಗಳನ್ನು ಮಾಡಿದ್ದಾರೆ. ಹರಿಹರ ಪೀಠದ ವಚನಾನಂದ ಸ್ವಾಮೀಜಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ವಚನಾನಂದ ಶ್ರೀಗಳ ಸಂದೇಶವನ್ನು ವಿನಯ್ ಕುಲಕರ್ಣಿಗೆ ತಿಳಿಸಿದ್ದಾರೆ. ಹರಿಹರಪೀಠ, ಕೂಡಲಸಂಗಮ ಪೀಠ ಎರಡು ಕಣ್ಣುಗಳಿದ್ದಂತೆ. ಇಬ್ಬರೂ ಸ್ವಾಮೀಜಿಗಳು ನಮ್ಮವರೇ ಎಲ್ಲ 80 ಲಕ್ಷ ಜನ ಅಣ್ಣ ತಮ್ಮಂದಿರಂತೆ ಇರೋಣ. ಮುಂದಿನ ದಿನಗಳಲ್ಲಿ ಇಬ್ಬರೂ ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಹೋರಾಟ ಮಾಡ್ತಾರೆ. ವಿಧಾನಸಭೆಯಲ್ಲಿ 17 ಜನ ಪಂಚಮಸಾಲಿ ಶಾಸಕರಿದ್ದೇವೆ. ಹೀಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಬೇಡ ಎಂದಿದ್ದೆ. ಹೀಗಾಗಿ ಒಂದು ದಿನ ಸಾಂಕೇತಿಕ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ ಎಂದರು.

ABOUT THE AUTHOR

...view details