ಬೆಳಗಾವಿ: ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಂದು 2 ಕೋಟಿ ರೂ.ಗಳ ಅನುದಾನದಲ್ಲಿ ಉಚಗಾವಿ ಕೆರೆ ಅಭಿವೃದ್ಧಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
2 ಕೋಟಿ ರೂ.ವೆಚ್ಚದ ಕೆರೆ ಅಭಿವೃದ್ಧಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ - ಬೆಳಗಾಔಇ ಸುದ್ದಿ
2 ಕೋಟಿ ರೂ.ಗಳ ಅನುದಾನದಲ್ಲಿ ಉಚಗಾವಿ ಕೆರೆ ಅಭಿವೃದ್ಧಿಯ ವಿವಿಧ ಕಾಮಗಾರಿಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ ನೀಡಿದರು.
![2 ಕೋಟಿ ರೂ.ವೆಚ್ಚದ ಕೆರೆ ಅಭಿವೃದ್ಧಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ Lakshmi Hebbalakar launches Rs 2 crore project for lake development](https://etvbharatimages.akamaized.net/etvbharat/prod-images/768-512-7227828-317-7227828-1589645856092.jpg)
2 ಕೋಟಿ ರೂ.ವೆಚ್ಚದ ಕೆರೆ ಅಭಿವೃದ್ಧಿಗೆ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ
ಬಳಿಕ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ರಾಜ್ಯ ಸರಕಾರದ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾಗಿರುವ ಈ ಎರಡು ಕೋಟಿ ಅನುದಾನದಲ್ಲಿ ಕೆರೆ ವಿಸ್ತೀರ್ಣ ಹೆಚ್ಚಳ, ಕೆರೆ ದಂಡೆ ಗುಂಟ ವಾಕಿಂಗ್ ಟ್ರ್ಯಾಕ್ ನಿರ್ಮಾಣ, ವಿದ್ಯುತ್ ದೀಪ ಅಳವಡಿಕೆ ಸೇರಿದಂತೆ ಇತರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಕೆರೆ ಅಭಿವೃದ್ಧಿ ಮತ್ತು ಸೌಂದರ್ಯ ಹೆಚ್ಚಿಸುವುದು ಮೊದಲ ಆದ್ಯತೆ ಎಂದು ಶಾಸಕಿ ಮಾಹಿತಿ ನೀಡಿದರು.
ಅಲ್ಲದೇ ಇದೇ ವೇಳೆ, ಕೆರೆ ಅಭಿವೃದ್ಧಿ ಸೇರಿದಂತೆ ಗ್ರಾಮಸ್ಥರ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿ, ತ್ವರಿತವಾಗಿ ಅವುಗಳ ನಿವಾರಣೆ ಮಾಡುವುದಾಗಿ ಭರವಸೆ ನೀಡಿದರು.