ಕರ್ನಾಟಕ

karnataka

ETV Bharat / state

ಕೊರೊನಾ 2ನೇ ಅಲೆ : 3 ವರ್ಷಕ್ಕೊಮ್ಮೆ ನಡೆಯುತ್ತಿದ್ದ ಲಕ್ಷಿದೇವಿ ಜಾತ್ರೆ ರದ್ದು - ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣ

ಯಾವುದೇ ಕಾರಣಕ್ಕೂ ಸರ್ಕಾರದ ಆದೇಶ ಮೀರಿ ಜಾತ್ರೆ ಮಾಡುವುದು ಬೇಡ. ಇನ್ನೂ ಎರಡು ವರ್ಷದ ನಂತರ ಜಾತ್ರೆ ಮಾಡಬಹುದು ಎಂದು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ದಿನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸರ್ಕಾರ ಜಾತ್ರೆ, ಸಭೆ-ಸಮಾರಂಭಗಳಿಗೆ ಬ್ರೇಕ್ ಹಾಕಿದ್ದರಿಂದ ಹುಕ್ಕೇರಿ ಲಕ್ಷಿದೇವಿ ಜಾತ್ರೆಯನ್ನು ಮುಂದೂಡಲಾಗಿದೆ..

Lakshmi Devi Fair cancel
ಲಕ್ಷೀ ದೇವಿ ಜಾತ್ರೆ ರದ್ದು

By

Published : Apr 4, 2021, 5:38 PM IST

ಚಿಕ್ಕೋಡಿ :ಕೊರೊನಾ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಐತಿಹಾಸಿಕ ಲಕ್ಷಿದೇವಿ ಜಾತ್ರೆಗೆ ಬ್ರೇಕ್ ಬಿದ್ದಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಲಕ್ಷ್ಮಿ-ದ್ಯಾಮವ್ವ ಜಾತ್ರೆಯನ್ನು ಈ ಬಾರಿ ಮುಂದೂಡಲಾಗಿದೆ.

ಕೊರೊನಾ 2ನೇ ಅಲೆ.. 3ವರ್ಷಕ್ಕೊಮ್ಮೆ ನಡೆಯುತ್ತಿದ್ದ ಲಕ್ಷಿದೇವಿ ಜಾತ್ರೆ ರದ್ದು..

ಏ.6ರಿಂದ ಆರಂಭವಾಗಬೇಕಿದ್ದ ಜಾತ್ರೆಯನ್ನ ಕೊರೊನಾ 2ನೇ ಅಲೆ ಕಾರಣದಿಂದ ರದ್ದು ಮಾಡಲಾಗಿದೆ. ಈ ಮೊದಲು ಬೆಳಗಾವಿ ಜಿಲ್ಲಾಡಳಿತ ಜಾತ್ರೆಗೆ ಅನುಮತಿ ನೀಡಿದ್ದ ಕಾರಣ ವಿಧಿವತ್ತಾಗಿ‌ ಜಾತ್ರೆಗೆ ಸಂಪೂರ್ಣ ತಯಾರಿ ಮಾಡಿಕೊಳ್ಳಲಾಗಿತ್ತು. ದೇವಸ್ಥಾನಕ್ಕೆ ಸುಣ್ಣ ಬಣ್ಣ ಸೇರಿ ತೇರನ್ನು ಕೂಡ ಹೊರಗೆ ತೆಗೆದು ದೇವಿಯ ಮೂರ್ತಿಯನ್ನು ಅಲಂಕಾ‌ರ ಮಾಡಿ ಜಾತ್ರೆಗೆ ಸಜ್ಜುಗೊಳಿಸಲಾಗಿತ್ತು.

ಆದರೆ, ಏಕಾಏಕಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಜಾತ್ರೆ ರದ್ದು ಮಾಡಿ ಆದೇಶಿಸಿದೆ. ಇದರಿಂದ ಜಾತ್ರೆಯ ಸಂಭ್ರಮದಲ್ಲಿದ್ದ ಜನರಿಗೆ ನಿರಾಶೆಯಾಗಿದೆ. ಜಾತ್ರೆ ರದ್ದಾದ ಹಿನ್ನೆಲೆ ಸಾಕಷ್ಟು ಬಂಡವಾಳ ಹಾಕಿ ಸಾಮಗ್ರಿಗಳನ್ನ ಖರೀದಿಸಿದ್ದ ವ್ಯಾಪಾರಸ್ಥರು ಹಾಗೂ ಅಂಗಡಿಕಾರರಿಗೂ ನಷ್ಟ ಅನುಭವಿಸುವ ಸ್ಥಿತಿ ಎದುರಾಗಿದೆ.

ಯಾವುದೇ ಕಾರಣಕ್ಕೂ ಸರ್ಕಾರದ ಆದೇಶ ಮೀರಿ ಜಾತ್ರೆ ಮಾಡುವುದು ಬೇಡ. ಇನ್ನೂ ಎರಡು ವರ್ಷದ ನಂತರ ಜಾತ್ರೆ ಮಾಡಬಹುದು ಎಂದು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ದಿನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸರ್ಕಾರ ಜಾತ್ರೆ, ಸಭೆ-ಸಮಾರಂಭಗಳಿಗೆ ಬ್ರೇಕ್ ಹಾಕಿದ್ದರಿಂದ ಹುಕ್ಕೇರಿ ಲಕ್ಷಿದೇವಿ ಜಾತ್ರೆಯನ್ನು ಮುಂದೂಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಜಾತ್ರಾ ಕಮಿಟಿ‌ ಅಧ್ಯಕ್ಷ ಸಂಜು ನಾಯಕ್ ಹೇಳಿದರು.

ABOUT THE AUTHOR

...view details