ಕರ್ನಾಟಕ

karnataka

ETV Bharat / state

ಡಿಕೆ ಶಿವಕುಮಾರ್ ಜೊತೆ ಫಿಕ್ಸಿಂಗ್ ಮಾಡಿಕೊಂಡಿದ್ದೇ ಬಿಜೆಪಿ ಸೋಲಿಗೆ ಕಾರಣ: ರಹಸ್ಯ ಬಿಚ್ಚಿಟ್ಟ ಲಖನ್ ಜಾರಕಿಹೊಳಿ

ಮಹಾಂತೇಶ ಕವಟಗಿಮಠ ಸೋಲಿಗೆ ಬಿಜೆಪಿ ನಾಯಕರು ಡಿಕೆ ಶಿವಕುಮಾರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇ ಸೋಲಿಗೆ ಕಾರಣವಾಗಿದೆ‌. 5 ಮತ್ತು 6ನೇ ತಾರೀಖಿಗೆ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಲಖನ್ ಜಾರಕಿಹೊಳಿ‌ ಆರೋಪ ಮಾಡಿದರು..

ರಹಸ್ಯ ಬಿಚ್ಚಿಟ್ಟ ಲಖನ್ ಜಾರಕಿಹೊಳಿ
ರಹಸ್ಯ ಬಿಚ್ಚಿಟ್ಟ ಲಖನ್ ಜಾರಕಿಹೊಳಿ

By

Published : Dec 14, 2021, 10:34 PM IST

ಬೆಳಗಾವಿ :ಡಿಕೆ ಶಿವಕುಮಾರ್ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರಿಂದ ಬಿಜೆಪಿಗೆ ಸೋಲಾಗಿದ್ದು ಫಿಕ್ಸಿಂಗ್ ಮಾಡಿಕೊಳ್ಳದಿದ್ದರೆ ನಾನು ಗೆಲ್ಲುತ್ತಿದ್ದೆ, ಬಿಜೆಪಿ ಗೆಲ್ಲುತ್ತಿತ್ತು ಎಂದು ವಿಜೇತ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.

ರಹಸ್ಯ ಬಿಚ್ಚಿಟ್ಟ ಲಖನ್ ಜಾರಕಿಹೊಳಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರಿಂದ ಬಿಜೆಪಿ ಸೋಲಾಗಿದೆ. ಫಿಕ್ಸಿಂಗ್ ಮಾಡಿಕೊಳ್ಳದಿದ್ದರೆ ನಾನು ಗೆಲ್ಲುತ್ತಿದ್ದೆ, ಬಿಜೆಪಿ ಗೆಲ್ಲುತ್ತಿತ್ತು. ಕಾಂಗ್ರೆಸ್ ನವರೇ ಮೋಸ ಮಾಡಿದ್ದಾರೆ ಎಂದರು.

13 ಜನ ಬಿಜೆಪಿ ಶಾಸಕರು, 2 ಎಂಪಿಗಳಿದ್ದಾರೆ. ಒಬ್ಬ ರಾಜ್ಯಸಭಾ ಸದಸ್ಯರಿದ್ದಾರೆ. ಯಾರ ಮೇಲೂ ಆರೋಪ ಮಾಡುವುದಲ್ಲ, ಇನ್ನೊಬ್ಬರ ಮೇಲೆ ಹಾಕುತ್ತಿದ್ದಾರೆ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ನಿಯತ್ತಾಗಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಹಾಂತೇಶ ಕವಟಗಿಮಠ ಸೋಲಿಗೆ ಬಿಜೆಪಿ ನಾಯಕರು ಡಿಕೆ ಶಿವಕುಮಾರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇ ಕಾರಣವಾಗಿದೆ‌ ಎಂದು ಆರೋಪಿಸಿದ ಅವರು, 5 ಮತ್ತು 6ನೇ ತಾರೀಖಿಗೆ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದರು. ಈ ಕುರಿತು ಬಿಜೆಪಿ ಹೈಕಮಾಂಡ್ ಗೆ ಸಹೋದರರು ಗಮನಕ್ಕೆ ತರುತ್ತಾರೆ. ಜಾರಕಿಹೋಳಿ ಸಹೋದರರಿಗೆ ಕೆಟ್ಟ ಹೆಸರು ತರುವ ಒಪ್ಪಂದ ಮಾಡಿಕೊಂಡು ಬಿಜೆಪಿ ಸೋಲಿಸಲಾಗಿದೆ ಎಂದು ಲಖನ್ ಜಾರಕಿಹೊಳಿ‌ ಸಹೋದರರ ರಕ್ಷಣೆಗೆ ನಿಂತಿದ್ದಾರೆ.

ಇದನ್ನೂ ಓದಿ : ಅವರು ಬಟ್ಟೆ ಬಿಚ್ಚಿದ್ದನ್ನು ನಾವೆಲ್ಲರೂ ನೋಡಿದ್ದೇವೆ: ಬೆಳಗಾವಿಗೆ ಬರುತ್ತಿದ್ದಂತೆ ಡಿಕೆಶಿ ಟಾಂಗ್

ABOUT THE AUTHOR

...view details