ಗೋಕಾಕ:ತಾಲೂಕಿನಲ್ಲಿ ಜಾರಕಿಹೊಳಿ ಸಹೋದರರ ಚುನಾವಣೆಯ ಜಿದ್ದಾಜಿದ್ದು ಜೋರಾಗಿದ್ದು, ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ತಾಲೂಕು ಪಂಚಾಯತಿ ಕಾರ್ಯಾಲಯಕ್ಕೆ ಏಕಾಏಕಿ ಭೇಟಿ ನೀಡಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಅವರ ಜೊತೆ ಕೆಲಕಾಲ ಮಾತುಕತೆ ನಡೆಸಿದರು.
ತಾ.ಪಂ ಇಒ ಭೇಟಿ ಮಾಡಿದ ಲಖನ್ ಜಾರಕಿಹೊಳಿ - ತಾಲೂಕು ಪಂಚಾಯತಿ
ತಾಪಂಗೆ ಭೇಟಿ ನೀಡಿ ಇಒ ಜೊತೆ ಮಾತುಕತೆ ನಡೆಸಿದ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ.
Lakhan jarkiholi
ಸರ್ಕಾರದಿಂದ ಬಂದ ಅನುದಾನ ಸರಿಯಾಗಿ ಎಲ್ಲ ತಾ.ಪಂ. ಸದಸ್ಯರ ಕ್ಷೇತ್ರಗಳ ಅಭಿವೃದ್ಧಿಗೆ ಹಂಚಿಕೆಯಾಗಬೇಕು. ಯಾರ ಒತ್ತಡಕ್ಕೆ ಮಣಿದು ಬೇಕಾಬಿಟ್ಟಿ ಪಿಡಿಓಗಳನ್ನು ವರ್ಗಾವಣೆ ಮಾಡಬಾರದು. ರಾಜಕೀಯ ಮುಖಂಡರ ಮಾತುಗಳಿಗೆ ಮಣೆ ಹಾಕದೆ ನ್ಯಾಯಬದ್ಧವಾಗಿ ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ತಾಲೂಕಿನ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕೆಲಸ ಮಾಡಿ ಜನರಿಂದ ಒಳ್ಳೆಯ ಹೆಸರು ಪಡೆಯಬೇಕು ಎಂದು ಸಲಹೆ ನೀಡಿದರು. ಕೊನೆಗೆ ತಪ್ಪು ಮಾಡಿದವರಿಗೆ ಶಿಕ್ಷೆ ಖಂಡಿತವಾಗಿ ಆಗುತ್ತದೆ ಎಂದು ಎಚ್ಚರಿಕೆ ನೀಡಿ ತೆರಳಿದರು.