ಚಿಕ್ಕೋಡಿ: ಕರ್ನಾಟಕದಲ್ಲಿ ಎರಡನೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯ ಕೆಲ ತಾಲೂಕುಗಳಲ್ಲಿ ತಜ್ಞ ವೈದ್ಯರ ಕೊರತೆಯಿಂದಾಗಿ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳ ಮೊರೆ ಹೊಗುವಂತಹ ಪರಿಸ್ಥತಿ ಎದುರಾಗಿದೆ.
ಚಿಕ್ಕೋಡಿ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಅನಸ್ತೇಷಿಯಾ ವೈದ್ಯರು, ಚಿಕ್ಕ ಮಕ್ಕಳ ತಜ್ಞ ಹಾಗೂ ಚರ್ಮ ರೋಗದ ತಜ್ಞರು ಇಲ್ಲದೆ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ವಿಚಾರವಾಗಿ ತಾಲೂಕು ವೈದ್ಯಾಧಿಕಾರಿಯನ್ನು ಪ್ರಶ್ನಿಸಿದಾಗ, ಚಿಕ್ಕೋಡಿಯಲ್ಲಿ ಮೊದಲು ಅನಸ್ತೇಷಿಯಾ ವೈದ್ಯರು ಇದ್ದು, ಈಗ ಅವರು ಬಡ್ತಿಯಾಗಿ ಹೋಗಿದ್ದಾರೆ.