ಕರ್ನಾಟಕ

karnataka

ETV Bharat / state

ಕುಂದಾನಗರಿಯಲ್ಲಿ ಮಳೆರಾಯನ ಅಬ್ಬರ; ರೈತರ ಮೊಗದಲ್ಲಿ ಮಂದಹಾಸ - undefined

ಬಿಸಿಲಿನ ಬೇಗೆಯಿಂದ ಬಳಲಿದ್ದ ಕುಂದಾನಗರಿ ಜನತೆಗೆ ವರುಣ ತಂಪೆರೆದಿದ್ದಾನೆ. ಇದರಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆ ಗರಿಗೆದರಿವೆ.

ಬೆಳಗಾವಿಯಲ್ಲಿ ಸುರಿದ ಮಳೆ

By

Published : Jun 23, 2019, 4:19 AM IST

ಬೆಳಗಾವಿ:ಕುಂದಾನಗರಿ ಬೆಳಗಾವಿಯಲ್ಲಿ ಮಳೆರಾಯನ ಅಬ್ಬರ ಆರಂಭವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ನಿನ್ನೆ ಬೆಳಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ‌ಮಧ್ಯಾಹ್ನದ ಹೊತ್ತಿಗೆ ಮಳೆರಾಯ ಅಬ್ಬರಿಸಿದ್ದು, ರೈತರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಬಿಸಿಲಿನ ಜಳಕ್ಕೆ ಬಳಲಿದ್ದ ಕುಂದಾನಗರಿ ಜನತೆಗೆ ವರುಣ ತಂಪೆರೆದಿದ್ದಾನೆ.

ಬೆಳಗಾವಿಯಲ್ಲಿ ಸುರಿದ ಮಳೆ

ಬೆಳಗಾವಿ ಸುತ್ತಮುತ್ತ ಕೂಡ ಉತ್ತಮ ಮಳೆಯಾಗಿದ್ದು, ಮುಂಗಾರು ಬಿತ್ತನೆ‌ ಮಾಡಿದ್ದ ರೈತರ ಮೊಗದಲ್ಲಿ‌ ಮಂದಹಾಸ ಮೂಡಿಸಿತು.
ಮಳೆಯಿಂದ ‌ನಗರದ‌ ಕೆಲವಡೆ ಸಂಚಾರ ಸಮಸ್ಯೆ ತಲೆದೂರಿತು. ರಸ್ತೆಗಳು ಜಲಾವೃತಗೊಂಡು‌ ಬೈಕ್ ಸವಾರರು‌ ಪರದಾಡುವಂತಾಯಿತು.
ಕಳೆದ ಮೂರು‌ ದಿನಗಳಿಂದ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ರೈತರು ಸಂತೋಷಗೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details