ಕರ್ನಾಟಕ

karnataka

ETV Bharat / state

ಸಚಿವ ಜಾರಕಿಹೊಳಿ ಕೈ ಕುಲುಕಿ ಬಿಗಿದಪ್ಪಿ ಬೆನ್ನು ತಟ್ಟಿದ ಈಶ್ವರಪ್ಪ - ramesh jarakiholi

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಸುಖಾಂತ್ಯ ಕಂಡ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಅವರು ಸಚಿವ ರಮೇಶ್ ಜಾರಕಿಹೊಳಿ‌ ಅವರನ್ನು ಆಲಿಂಗಿಸಿ ಬೆನ್ನು ತಟ್ಟಿ ಅಭಿನಂದಿಸಿದರು.

hug
hug

By

Published : Aug 29, 2020, 3:46 PM IST

ಬೆಳಗಾವಿ:ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಸುಖಾಂತ್ಯ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಸಚಿವ ರಮೇಶ್ ಜಾರಕಿಹೊಳಿ‌ ಅವರನ್ನು ಆಲಿಂಗಿಸಿ ಬೆನ್ನು ತಟ್ಟಿ ಅಭಿನಂದಿಸಿದರು.

ಪೀರನವಾಡಿಯ ಸಂಗೊಳ್ಳಿ ರಾಯಣ್ಣ ‌ಪುತ್ಥಳಿ ಮರುಸ್ಥಾಪನೆ ‌ವಿವಾದವನ್ನು‌ ತ್ವರಿತ ಹಾಗೂ ಶಾಂತ ರೀತಿಯಿಂದ ಜಿಲ್ಲಾಡಳಿತ ಬಗೆಹರಿಸಿದೆ. ಶಾಂತಿ ಸಭೆ ಯಶಸ್ಸುಗೊಳ್ಳುವಲ್ಲಿ ನಿಮ್ಮ ಪಾತ್ರ ಬಹಳಷ್ಟಿದೆ ಎಂದು ಸಚಿವ ಜಾರಕಿಹೊಳಿ ಅವರನ್ನು ಈಶ್ವರಪ್ಪ ಶ್ಲಾಘಿಸಿದರು.

ಸಚಿವ ಜಾರಕಿಹೊಳಿಯನ್ನು ಅಪ್ಪಿಕೊಂಡ ಈಶ್ವರಪ್ಪ

ಇದೇ ವೇಳೆ, ‌ರಾಯಣ್ಣ ಹಾಗೂ ಛತ್ರಪತಿ ಶಿವಾಜಿಯವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಹಾರೈಸಿದರು. ಬಳಿಕ ಉಭಯ ನಾಯಕರು ಸಚಿವ ನಾಗೇಶ ಜತೆಗೂಡಿ ಶಿವಾಜಿ ಹಾಗೂ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ‌ ‌ಮಾಡಿದರು.

ABOUT THE AUTHOR

...view details