ಬೆಳಗಾವಿ: ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವುದೇ ತಮ್ಮ ಮಹದಾಸೆ ಎಂದು ಚಂದಗಡ ಕ್ಷೇತ್ರದ ಎನ್ಸಿಪಿ ಶಾಸಕ ರಾಜೇಶ್ ಪಾಟೀಲ್ ನೀಡಿದ ಹೇಳಿಕೆ ಖಂಡಿಸಿ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಚನ್ನಮ್ಮ ವೃತ್ತದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು.
ಎನ್ಸಿಪಿ ಶಾಸಕನ ಉದ್ಧಟತನದ ಹೇಳಿಕೆಗೆ ಖಂಡನೆ: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ಎನ್ಸಿಪಿ ಶಾಸಕ ರಾಜೇಶ್ ಪಾಟೀಲ್ ನೀಡಿದ ಹೇಳಿಕೆ ಖಂಡಿಸಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು.
ಶಿವಸೇನೆ ಪುಂಡಾಟ ಖಂಡಿಸಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ
ಸಂಕೇಶ್ವರ ನಿಪ್ಪಾಣಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಅವರು, ಎನ್ಸಿಪಿ ಮತ್ತು ಶಿವಸೇನೆ ನಾಯಕರು ಹೀಗೆ ತಮ್ಮ ಉದ್ಧಟತನದ ಹೇಳಿಕೆ ಮುಂದುವರೆಸಿದರೆ ಇಲ್ಲಿನ ಮರಾಠಿ ಫಲಕಗಳಿಗೆ ಮಸಿ ಬಳೆಯುವುದಾಗಿ ಎಚ್ಚರಿಕೆ ನೀಡಿದ್ರು. ಕರ್ನಾಟಕದಲ್ಲಿ ಮರಾಠಿ ಚಿತ್ರಗಳನ್ನು ಬಂದ್ ಮಾಡುವ ಎಚ್ಚರಿಕೆಯನ್ನೂ ಇದೇ ಸಂದರ್ಭದಲ್ಲಿ ನೀಡಿದ್ರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಫೋಟೋಗಳನ್ನು ಸುಡುವುದರ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ರು.