ಕರ್ನಾಟಕ

karnataka

ETV Bharat / state

ಕೃಪಾ ಸ್ವಯಂ ಸೇವಾ ಸಂಸ್ಥೆಯಿಂದ ಬಡಜನರಿಗೆ ದಿನಸಿ ವಿತರಣೆ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸಂಕೇಶ್ವರದ ಕೃಪಾ ಸ್ವಯಂ ಸೇವಾ ಸಂಸ್ಥೆಯಿಂದ ಬಡಕುಟುಂಬಗಳಿಗೆ ದಿನಸಿ ವಸ್ತುಗಳನ್ನು ವಿತರಿಸಲಾಗುತ್ತಿದೆ.

Distributing groceries
ದಿನಸಿ ವಿತರಣೆ

By

Published : Apr 7, 2020, 3:42 PM IST

ಅಥಣಿ:ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸಂಕೇಶ್ವರದ ಕೃಪಾ ಸ್ವಯಂ ಸೇವಾ ಸಂಸ್ಥೆಯಿಂದ ಬಡಕುಟುಂಬಗಳಿಗೆ ದಿನಸಿ ವಸ್ತುಗಳನ್ನು ವಿತರಿಸಲಾಗುತ್ತಿದೆ.

ಕೊರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ದುಡಿಯುವ ವರ್ಗದ ಜನರು ಕೆಲಸ ಇಲ್ಲದೆ ಇತ್ತ ದಿನ ಬಳಕೆಯ ವಸ್ತುಗಳಿಗೆ ಹಣವೂ ಇಲ್ಲದೆ ಜೀವನ ನಿರ್ವಹಣೆ ಮಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಲ್ಲಿ ದಾನಿಗಳು ನೀಡುತ್ತಿರುವ ಆಹಾರ ಮತ್ತು ದಿನಸಿ ವಸ್ತುಗಳೇ ಸದ್ಯ ಬಡಕುಟುಂಬಗಳಿಗೆ ಆಧಾರವಾಗಿದ್ದು, ಹಲವೆಡೆ ಇಂತಹ ಸಾಮಾಜಿಕ ಕಳಕಳಿಯ ಜನರು ಅಲ್ಲಲ್ಲಿ ಬಡವರ ಸಹಾಯಕ್ಕೆ ಮುಂದಾಗುತ್ತಿದ್ದಾರೆ.

ಕೃಪಾ ಸ್ವಯಂ ಸೇವಾ ಸಂಸ್ಥೆಯಿಂದ ಬಡಜನರಿಗೆ ದಿನಸಿ ವಿತರಣೆ
ಕಳೆದ ಎರಡು ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸಂಕೇಶ್ವರದ ಕೃಪಾ ಸ್ವಯಂ ಸೇವಾ ಸಂಸ್ಥೆಯಿಂದ ದಿನಸಿ ವಸ್ತುಗಳನ್ನು ವಿತರಿಸಲಾಗುತ್ತಿದೆ. ತಾವು ಕೊಡುವ ದಾನ ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಬೇಕು ಎನ್ನುವ ಕಾರಣಕ್ಕೆ ಕೃಪಾ ಸ್ವಯಂ ಸೇವಾ ಸಂಸ್ಥೆಯ ನಿಜಪ್ಪ ಹಿರೇಮನಿ ಮತ್ತು ದಂಪತಿ ಸ್ವತಃ ಬಡ ಜನರ ಮನೆಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ದಿನಸಿ ವಿತರಿಸುತ್ತಿದ್ದಾರೆ.

ಇನ್ನು ಸ್ಲಂಗಳಲ್ಲಿ ವಾಸಿಸುವ 200ಕ್ಕೂ ಹೆಚ್ಚು ಕಡು ಬಡವರಿಗೆ ಅಕ್ಕಿ, ಬೇಳೆ, ರವೆ ಮತ್ತು ತರಕಾರಿ, ಸೋಪು, ಟೂತ್​ ಪೇಸ್ಟ್​ ಸೇರಿದಂತೆ ದಿನಸಿ ವಸ್ತುಗಳನ್ನು ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ABOUT THE AUTHOR

...view details