ಚಿಕ್ಕೋಡಿ:ಬತ್ತಿ ಹೋಗಿರುವ ಕೃಷ್ಣಾ ನದಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡ್ಕಲ್ ಜಲಾಶಯದಿಂದ ಒಂದು ಟಿಎಂಸಿ ನೀರು ಬಿಡುಗಡೆ ಪ್ರಕ್ರಿಯೆ ಮುಂದುವರೆದಿದ್ದು ಧೂಪದಾಳ ವೇರ್ ನಿಂದ ಒಂದು ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ.
ಕೃಷ್ಣೆಯತ್ತ ಹಿಡ್ಕಲ್ ಜಲಾಶಯ ನೀರು,12 ದಿನಗಳ ಸುಧೀರ್ಘ ಪಯಣ - kannada news
ಹಿಡ್ಕಲ್ ಜಲಾಶಯದಿಂದ ಬಿಡುಗಡೆಯಾಗಿ ಧೂಪದಾಳ ವೇರ್ ತಲುಪಿದ್ದ ಒಂದು ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ.
ಸೋಮವಾರ ಹಿಡ್ಕಲ್ ಜಲಾಶಯದಿಂದ ಬಿಡುಗಡೆಯಾಗಿದ್ದ ಮೂರು ಸಾವಿರ ಕ್ಯೂಸೆಕ್ ನೀರು ಸೋಮವಾರ ಮಧ್ಯಾಹ್ನದ ಹೊತ್ತಿಗೆ ಧೂಪದಾಳ ವೇರ್ ತಲುಪಿತ್ತು. ಧೂಪದಾಳ ವೇರ್‌ನಿಂದ ಬಿಡುಗಡೆಯಾದ ನೀರು ಘಟಪ್ರಭಾ ಎಡದಂಡೆ ಕಾಲುವೆಯ ಮೂಲಕ 50 ಕಿ.ಮೀ ದೂರವನ್ನು ಕ್ರಮಿಸಿ ಬುಧವಾರ ಮುಗಳಖೋಡ ಚೌಕಿಯನ್ನು ತಲುಪಲಿದೆ. ಅಲ್ಲಿಂದ ಅಥಣಿ ತಾಲೂಕಿನ ಶೇಗುಣಸಿವರೆಗೆ ನೀರು ಹರಿಯಬೇಕಿದೆ.
ಹಿಡ್ಕಲ್ ಡ್ಯಾಮಿನಿಂದ 94 ಕಿ.ಮೀ. ದೂರದ ಕೃಷ್ಣೆಗೆ ಘಟಪ್ರಭಾ ನೀರು ಹರಿಸಲು ನಿರ್ಧಾರ ಕೈಗೊಂಡ ಕರ್ನಾಟಕ ಸರ್ಕಾರ ಕೊಯ್ನಾ ನೀರಿನ ಆಸೆ ಬಿಟ್ಟು, ಘಟಪ್ರಭಾ ನೀರು ಕೃಷ್ಣೆಯನ್ನು ತಲುಪಲು 12 ದಿನಗಳು ಬೇಕು. ಯಾವುದೇ ಅಡೆತಡೆಗಳಿಲ್ಲದೆ ಕೃಷ್ಣೆಗೆ ನೀರು ಬಂದು ತಲುಪುತ್ತಾ ಕಾಯ್ದು ನೋಡಬೇಕಿದೆ.