ಚಿಕ್ಕೋಡಿ :ಮಹಾರಾಷ್ಟ್ರದಲ್ಲಿ ಕಳೆದೆರಡು ದಿನಗಳಿಂದ ಮಳೆಯ ಪ್ರಮಾಣ ಇಳಿಮುಖವಾಗಿದೆ. ಆದರೆ, ಕಳೆದ ಮೂರು ದಿನದ ಹಿಂದೆ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ಕೃಷ್ಣಾ, ವೇದಗಂಗಾ ಮತ್ತು ದೂಧ್ ಗಂಗಾ ನದಿಗಳು ತುಂಬಿ ಹರಿಯುತ್ತಿವೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 1,73,500 ಕ್ಯೂಸೆಕ್, ದೂಧ್ಗಂಗಾ ನದಿಯಿಂದ 33,264 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಒಟ್ಟು 2,06,500 ಕ್ಯೂಸೆಕ್ಗೂ ಅಧಿಕ ನೀರು ರಾಜ್ಯದ ಕೃಷ್ಣಾ ನದಿಗೆ ಹರಿದು ಬರುತ್ತಿದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಸ್ ಸಂಪಗಾಂವಿ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಕೊಯ್ನಾ ಜಲಾಶಯದಿಂದ ಇಂದು ಕೃಷ್ಣಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹಾಗೂ 2,100 ಕ್ಯೂಸೆಕ್ ನೀರನ್ನು ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆಗೆ ಬಿಡುಗಡೆ ಮಾಡಲಾಗುತ್ತಿದೆ. ಸದ್ಯ ಕೊಯ್ನಾ ಜಲಾಶಯ ಶೇ89 ರಷ್ಟು, ವಾರಣಾ ಜಲಾಶಯ ಶೇ92, ರಾಧಾನಗರಿ ಜಲಾಶಯ ಶೇ99, ಕಣೇರ ಜಲಾಶಯ ಶೇ 90, ಧೂಮ ಜಲಾಶಯ ಶೇ94, ಪಾಟಗಾಂವ ಶೇ100, ಧೂದಗಂಗಾ ಶೇ 93ರಷ್ಟು ತುಂಬಿವೆ. ಹಿಪ್ಪರಗಿ ಬ್ಯಾರೇಜ್‌ನಿಂದ 2,32,000 ಹಾಗೂ ಆಲಮಟ್ಟಿ ಜಲಾಶಯದಿಂದ 2,50,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.
ಮಹಾರಾಷ್ಟ್ರದ ಕೊಯ್ನಾ - 73 ಮಿ.ಮೀ, ನವಜಾ - 138 ಮಿ.ಮೀ, ಮಹಾಬಲೇಶ್ವರ - 105 ಮಿ.ಮೀ, ವಾರಣಾ - 65 ಮಿ.ಮೀ, ಕಾಳಮ್ಮವಾಡಿ - 43 ಮಿ.ಮೀ, ರಾಧಾನಗರಿ - 75 ಮಿ.ಮೀ, ಪಾಟಗಾಂವ - 120 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.