ಕರ್ನಾಟಕ

karnataka

ETV Bharat / state

ತಗ್ಗಿದ ಮಳೆ: ಕೃಷ್ಣಾ ನದಿ ಒಳಹರಿವು ಇಳಿಮುಖ

ಮಹಾರಾಷ್ಟ್ರ, ಚಿಕ್ಕೋಡಿ ಉಪ ವಿಭಾಗದಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವಿವು ಇಳಿಮುಖವಾಗಿದೆ.

Krishna river inflow
ಕೃಷ್ಣಾ ನದಿ ಒಳಹರಿವು ಇಳಿಮುಖ

By

Published : Aug 31, 2020, 12:38 PM IST

ಚಿಕ್ಕೋಡಿ: ಮಹಾರಾಷ್ಟ್ರ, ಚಿಕ್ಕೋಡಿ ಉಪ ವಿಭಾಗದಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆ ಪ್ರಮಾಣ ಇಳಿಕೆ ಕಂಡಿದೆ. ಹಾಗಾಗಿ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವು ಇಳಿಮುಖವಾಗಿದೆ.

ಕೃಷ್ಣಾ ನದಿ ಒಳಹರಿವು ಇಳಿಮುಖ

43,000 ಕ್ಯೂಸೆಕ್‌ಕ್ಕಿಂತ ಹೆಚ್ಚು ಕೃಷ್ಣಾ ನದಿ ಒಳಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ ಸುಭಾಸ ಸಂಪಗಾಂವಿ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 36,875 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 6,160 ಕ್ಯೂಸೆಕ್ ನೀರು ಹೀಗೆ ಒಟ್ಟು 43,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ-42 ಮಿ.ಮೀ, ನವಜಾ-36 ಮಿ.ಮೀ, ಮಹಾಬಲೇಶ್ವರ- 75 ಮಿ.ಮೀ, ವಾರಣಾ-26 ಮಿ.ಮೀ, ಕಾಳಮ್ಮವಾಡಿ-12 ಮಿ.ಮೀ, ರಾಧಾನಗರಿ-28 ಮಿ.ಮೀ, ಪಾಟಗಾಂವ-26 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ.

ಸದ್ಯ ಕೊಯ್ನಾ ಜಲಾಶಯ 97%, ವಾರಣಾ ಜಲಾಶಯ 97%, ರಾಧಾನಗರಿ ಜಲಾಶಯ 98%, ಕಣೇರಿ ಜಲಾಶಯ 95%, ಧೂಮ ಜಲಾಶಯ 98%, ಪಾಟಗಾಂವ 100%, ಧೂದಗಂಗಾ 99%, ತುಂಬಿದೆ. ಹಿಪ್ಪರಗಿ ಬ್ಯಾರೆಜ್‌ನಿಂದ 25,000 ಹಾಗೂ ಆಲಮಟ್ಟಿ ಜಲಾಶಯದಿಂದ 26,922 ಕ್ಯೂಸೆಕ್ ನೀರನ್ನು ಹೊರಗಡೆ ಬಿಡಲಾಗುತ್ತಿದೆ.

ABOUT THE AUTHOR

...view details