ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಮತ್ತೆ ಮಳೆ ಆರ್ಭಟ ಜೋರಾಗಿದೆ. ಆದರೆ, ಕೃಷ್ಣಾ ನದಿ ನೀರು ಹರಿವಿನ ಪ್ರಮಾಣದಲ್ಲಿ ಯಥಾಸ್ಥಿತಿ ಇದೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 77,875 ಕ್ಯುಸೆಕ್, ದೂಧಗಂಗಾ ನದಿಯಿಂದ 16,192 ಕ್ಯುಸೆಕ್ ಹಾಗೂ ಕೊಯ್ನಾ ಜಲಾಶಯದಿಂದ 2,100 ಕ್ಯುಸೆಕ್ ನೀರು ಸೇರಿ 96 ಸಾವಿರ ಕ್ಯುಸೆಕ್ ನೀರು ರಾಜ್ಯದಲ್ಲಿ ಹರಿಯುವ ಕೃಷ್ಣಾಗೆ ಬರುತ್ತಿದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಸ ಸಂಪಗಾಂವಿ ಅವರುಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.