ಚಿಕ್ಕೋಡಿ : ಮಹಾರಾಷ್ಟ್ರದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ತಗ್ಗಿದೆ. ಆದರೆ, ಕಳೆದ ಎರಡು ದಿನಗಳಿಂದ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ಕೃಷ್ಣಾ ನದಿಯ ನೀರಿನ ಮಟ್ಟ ಏಳು ಅಡಿವರೆಗೆ ಏರಿಕೆಯಾಗಿದೆ.
'ಮಹಾ'ಮಳೆ ಕಡಿಮೆಯಾದರೂ ತುಂಬಿ ಹರಿಯುತ್ತಿದ್ದಾಳೆ ಕೃಷ್ಣೆ - Rain in Belgaum district
ಕಳೆದ ಎರಡು ದಿನಕ್ಕೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಮಳೆಯಾಗಿರುವ ವರದಿಯಾಗಿದೆ. ಆದರೆ, ಕೃಷ್ಣೆ ಮಾತ್ರ ತನ್ನ ನೀರಿನ ಮಟ್ಟ ಹೆಚ್ಚಿಸಿಕೊಂಡು ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಟಿಸಿದ್ದಾಳೆ.
ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳು ತನ್ನ ಒಡಲನ್ನು ಬಿಟ್ಟು ಹರಿಯುತ್ತಿವೆ. ಕೃಷ್ಣಾ ನದಿ ಒಳ ಹರಿವು 2,29,500 ಕ್ಯೂಸೆಕ್ಗಿಂತ ಹೆಚ್ಚಿದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಸ್ ಸಂಪಗಾಂವಿ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 1,95,750 ಕ್ಯೂಸೆಕ್, ದೂಧಗಂಗಾ ನದಿಯಿಂದ 33,792 ಕ್ಯೂಸೆಕ್ ಹೀಗೆ ಒಟ್ಟು 2,29,500 ಕ್ಯೂಸೆಕ್ಗೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಕೊಯ್ನಾ ಜಲಾಶಯದಿಂದ ಇಂದು ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಲ್ಲ. ಕೇವಲ 2,100 ಕ್ಯೂಸೆಕ್ ನೀರು ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆಗೆ ಮಾತ್ರ ನೀರು ಬಿಡುಗಡೆ ಮಾಡಲಾಗುತ್ತಿದೆ.
ಮಹಾರಾಷ್ಟ್ರದ ಕೊಯ್ನಾ - 41 ಮಿ.ಮೀ, ನವಜಾ - 41 ಮಿ.ಮೀ, ಮಹಾಬಲೇಶ್ವರ - 47 ಮಿ.ಮೀ, ವಾರಣಾ - 35 ಮಿ.ಮೀ, ಕಾಳಮ್ಮವಾಡಿ - 24 ಮಿ.ಮೀ, ರಾಧಾನಗರಿ - 58 ಮಿ.ಮೀ, ಪಾಟಗಾಂವ - 20 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ. . ಸದ್ಯ ಕೊಯ್ನಾ ಜಲಾಶಯ ಶೇ 87ರಷ್ಟು, ವಾರಣಾ ಜಲಾಶಯ ಶೇ 92ರಷ್ಟು, ರಾಧಾನಗರಿ ಜಲಾಶಯ 98ರಷ್ಟು, ಕಣೇರ ಜಲಾಶಯ ಶೇ 89ರಷ್ಟು, ಧೂಮ ಜಲಾಶಯ ಶೇ 92, ಪಾಟಗಾಂವ ಶೇ 100, ಧೂದಗಂಗಾ ಶೇ93ರಷ್ಟು ತುಂಬಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 2,22,000 ಹಾಗೂ ಆಲಮಟ್ಟಿ ಜಲಾಶಯದಿಂದ 2,50,000 ಕ್ಯೂಸೆಕ್ ನೀರು ಹೊರಗೆ ಹರಿಸಲಾಗುತ್ತಿದೆ.