ಬೆಳಗಾವಿ:ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಪ್ರಮುಖ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ಪೊಲೀಸರು ಬಂಧಿಸಿದ್ದಾರೆ. ರಾಯಭಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಸೋಮನಗೌಡ ಪಾಟೀಲ ಬಂಧಿತ ಆರೋಪಿ. ಈ ಮೂಲಕ ನೇಮಕಾತಿ ಅಕ್ರಮದಲ್ಲಿ ಬಂಧಿತರ ಸಂಖ್ಯೆ 35ಕ್ಕೇರಿದೆ. ಗದಗಿನ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಅಭ್ಯರ್ಥಿಗಳಿಗೆ ರವಾನಿಸಿದ ಆರೋಪ ಕೇಳಿಬಂದಿದೆ.
ಗದಗ ಮುನ್ಸಿಪಲ್ ಪಿಯು ಕಾಲೇಜಿನ ಉಪಪ್ರಾಚಾರ್ಯ ಮಾರುತಿ ಸೋನವಣೆ ಪುತ್ರ ಸುಮಿತ್‌ಕುಮಾರ್‌ನನ್ನು ಈಗಾಗಲೇ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಉಪ ಪ್ರಾಚಾರ್ಯ ಮಾರುತಿ ಪುತ್ರನ ಜೊತೆಗೆ ಡೀಲ್ ಕುದುರಿಸಿದ್ದ ಸೋಮನಗೌಡ ಅಭ್ಯರ್ಥಿಗಳಿಂದ 7.10 ಲಕ್ಷ ರೂ ಪಡೆದು ಅದರಲ್ಲಿ 4.50 ಲಕ್ಷ ರೂ. ಸುಮಿತ್‌ಕುಮಾರ್‌ಗೆ ನೀಡಿದ್ದ ಎಂದು ತಿಳಿದುಬಂದಿದೆ.