ಕರ್ನಾಟಕ

karnataka

ETV Bharat / state

ಹೆಸ್ಕಾಂ ಪರೀಕ್ಷೆ ಅಕ್ರಮ ಪ್ರಕರಣ.. ಮತ್ತೆ ಇಬ್ಬರನ್ನು ಬಂಧಿಸಿದ ಪೊಲೀಸರು - Etv bharat Kannada

ಹೆಸ್ಕಾಂ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

kptcl-exam-scam-two-accuses-arrested
ಸ್ಕಾಂ ಪರೀಕ್ಷೆ ಅಕ್ರಮ ಪ್ರಕರಣ...ಮತ್ತೆ ಇಬ್ಬರನ್ನು ಬಂಧಿಸಿದ ಪೊಲೀಸರು

By

Published : Sep 5, 2022, 10:13 PM IST

Updated : Sep 6, 2022, 1:06 PM IST

ಬೆಳಗಾವಿ : ಹೆಸ್ಕಾಂ ಕಿರಿಯ ಸಹಾಯಕರ ಹುದ್ದೆಗೆ ನಡೆದಿದ್ದ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಬಂಧಿತರನ್ನು ಶಿರಹಟ್ಟಿ ಬಿ.ಕೆ. ಗ್ರಾಮದ ಬೀರಪ್ಪ ಲಕ್ಷ್ಮಣ ಹಣಗಂಡಿ (24) ಹಾಗೂ ಗೋಕಾಕ ತಾಲೂಕಿನ ಅರಭಾವಿ ಪಟ್ಟಣದ ಶಿವಾನಂದ ದುಂಡಪ್ಪ ಹಳ್ಳೂರ (23) ಎಂದು ಗುರುತಿಸಲಾಗಿದೆ.

ಬಂಧಿತ ಬೀರಪ್ಪ ಖಾಸಗಿ ಉದ್ಯೋಗಿಯಾಗಿದ್ದು, ಶಿರಹಟ್ಟಿ ಬಿ.ಕೆ. ಗ್ರಾಮದಲ್ಲಿ ನಡೆದ ಹೆಸ್ಕಾಂ ಪರೀಕ್ಷೆಯ ಪ್ರಶ್ನೆಗಳನ್ನು ಪ್ರಿಂಟ್ ತೆಗೆಯಲು ಲ್ಯಾಪ್ ಟಾಪ್ ತಂದಿದ್ದಲ್ಲದೇ ಸ್ಮಾರ್ಟ್ ವಾಚ್ ಖರೀದಿ ಮಾಡಿರುವುದಾಗಿ ಹೇಳಲಾಗಿದೆ. ಸದ್ಯ ಬಂಧಿತನಿಂದ ಪೊಲೀಸರು ಒಂದು ಮೊಬೈಲ್‌ ಮತ್ತು ಲ್ಯಾಪ್ ಟಾಪ್ ವಶಪಡಿಸಿಕೊಂಡಿದ್ದಾರೆ.

ಮತ್ತೊರ್ವ ಆರೋಪಿ ಶಿವಾನಂದ ಹಳ್ಳೂರ ಪರೀಕ್ಷೆ ಬರೆಯಲು ಇಲೆಕ್ಟ್ರಾನಿಕ್‌ ಡಿವೈಸ್ ಗಳನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ. ಈತನಿಂದ 5 ಮೊಬೈಲ್ ಮತ್ತು ಇಲೆಕ್ಟ್ರಾನಿಕ್ ಡಿವೈಸ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸಂಜೀವ್ ಪಾಟೀಲ ತಿಳಿಸಿದ್ದಾರೆ.

ಇದನ್ನೂ ಓದಿ :ಕೆಪಿಟಿಸಿಎಲ್ ಪರೀಕ್ಷೆ ಅಕ್ರಮದ ಐವರ ಜಾಮೀನು ಅರ್ಜಿ ವಜಾ.. ಮತ್ತೊಬ್ಬ ಆರೋಪಿ ಬಂಧನ

Last Updated : Sep 6, 2022, 1:06 PM IST

ABOUT THE AUTHOR

...view details