ಕರ್ನಾಟಕ

karnataka

ETV Bharat / state

ತತ್ತಿ ಖಾತೆಯಲ್ಲಿ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಖಾತೆ ಕೊಟ್ಟಿದ್ದಾರೆ : ಸಚಿವೆ ಜೊಲ್ಲೆ ಕುರಿತು ಸತೀಶ್​​ ಜಾರಕಿಹೊಳಿ‌ ವ್ಯಂಗ್ಯ - ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ

ಶಶಿಕಲಾಗೆ ದೇವರ ಜಪ ಮಾಡಲಿ ಎಂದು ಬೇರೆ ಖಾತೆ ಕೊಟ್ಟಿದ್ದಾರೆ. ಗುಡಿಗಳನ್ನು ಚೆನ್ನಾಗಿ ನೋಡಿಕೊಂಡು ಪೂಜೆ ಮಾಡಿಸಲಿ ಎಂದು ಖಾತೆ ಕೊಟ್ಟಿದ್ದಾರೆ. ಎಗ್ ಆದ ಮೇಲೆ ಮತ್ತೇನು ತಿಂತಾರೆ ಎನ್ನುವು ಚಿಂತೆ ಇತ್ತು. ಎಗ್ ಖಾತೆ ಸಾಕು ಮುಂದೆ ಏನಾದ್ರೂ ಅನಾಹುತ ಮಾಡಬಾರದು ಎಂದು ಸಿಎಂ ಮುಜರಾಯಿ ಖಾತೆ ನೀಡಿ ಒಳ್ಳೆ ಕೆಲಸ ಮಾಡಿದ್ದಾರೆ..

Satish Jarkiholi
ಸತೀಶ್​​ ಜಾರಕಿಹೊಳಿ‌

By

Published : Aug 14, 2021, 3:21 PM IST

ಬೆಳಗಾವಿ :ತತ್ತಿ ಖಾತೆಯಲ್ಲಿ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಮುಜರಾಯಿ ಖಾತೆ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ‌ ವ್ಯಂಗ್ಯವಾಡಿದರು.

ಸಚಿವೆ ಜೊಲ್ಲೆ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯ..

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪ ಹೊತ್ತಿರುವ ಶಶಿಕಲಾ ಜೊಲ್ಲೆಗೆ ತತ್ತಿ ಪಾಪ ತೊಳೆದುಕೊಳ್ಳಲು ಪ್ರಾಯಶ್ಚಿತ್ತ ಖಾತೆ ನೀಡಲಾಗಿದೆ. ಭ್ರಷ್ಟಾಚಾರವನ್ನು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಪಕ್ಷದಲ್ಲಿರುವವರೆಲ್ಲ ಸೇರಿ ಭ್ರಷ್ಟಾಚಾರ ಹಂಚಿಕೊಂಡಿರುತ್ತಾರೆ.

ಹಾಗಾಗಿ, ಆರೋಪದ ಕುರಿತಂತೆ ತನಿಖೆ ಮಾಡಿಲ್ಲ. ಯಾರಾದ್ರೂ ನ್ಯಾಯಾಲಯಕ್ಕೆ ಹೋಗಿಯೇ ಹೋಗ್ತಾರೆ. ತಡವಾದರೂ ಕೋರ್ಟ್​​​ನಿಂದ ತನಿಖೆ ಆಗುತ್ತದೆ. ಮರಳಿ ಶಶಿಕಲಾ ಅವರಿಗೆ ತತ್ತಿ ಖಾತೆ ನೀಡದಿರುವುದು ಸಂತೋಷ ತಂದಿದೆ ಎಂದರು.

ಜೊಲ್ಲೆಗೆ ದೇವರ ಜಪ ಮಾಡಲೆಂದು ಮುಜರಾಯಿ ಖಾತೆ :ಶಶಿಕಲಾಗೆ ದೇವರ ಜಪ ಮಾಡಲಿ ಎಂದು ಬೇರೆ ಖಾತೆ ಕೊಟ್ಟಿದ್ದಾರೆ. ಗುಡಿಗಳನ್ನು ಚೆನ್ನಾಗಿ ನೋಡಿಕೊಂಡು ಪೂಜೆ ಮಾಡಿಸಲಿ ಎಂದು ಖಾತೆ ಕೊಟ್ಟಿದ್ದಾರೆ. ಎಗ್ ಆದ ಮೇಲೆ ಮತ್ತೇನು ತಿಂತಾರೆ ಎನ್ನುವು ಚಿಂತೆ ಇತ್ತು. ಎಗ್ ಖಾತೆ ಸಾಕು ಮುಂದೆ ಏನಾದ್ರೂ ಅನಾಹುತ ಮಾಡಬಾರದು ಎಂದು ಸಿಎಂ ಮುಜರಾಯಿ ಖಾತೆ ನೀಡಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದರು.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ :ಬೆಳಗಾವಿ ಮಹಾನಗರ ಪಾಲಿಕೆ ಚುಮಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಂ ಬಿ ಪಾಟೀಲ ಸೇರಿದಂತೆ ಮೂವರ ಉಸ್ತುವಾರಿ ಸಮಿತಿಯಿಂದ‌ ಸೋಮವಾರ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

ಆದರೆ, ರಾಜ್ಯ ಕೆಪಿಸಿಸಿ ವತಿಯಿಂದ ಪಕ್ಷದ ಚಿಹ್ನೆ ಆಧಾರದ ಮೇಲೆ ಪಾಲಿಕೆ ಚುನಾವಣೆ ನಡೆಸಬೇಕೆಂದು ತೀರ್ಮಾನಿಸಲಾಗಿದೆ. ಪಾಲಿಕೆ‌ ಚುನಾವಣೆ ಸ್ಥಳೀಯ ಮುಖಂಡರ ಮೇಲೆ ಅವಲಂಬಿಸಿದೆ. ಹೀಗಾಗಿ, ಸ್ಥಳೀಯ ಕಾರ್ಯಕರ್ತರು, ಮುಖಂಡರೊಂದಿಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ‌ ಪ್ರತಿಕ್ರಿಯೆ ನೀಡಿರುವುದು..

ಕಳೆದ ಬಾರಿಯೂ ಬೆಳಗಾವಿ ಪಾಲಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಭಾವವಿತ್ತು. ಈ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ರಭಾವಿ ಅಭ್ಯರ್ಥಿಗಳನ್ನು ಪಾಲಿಕೆ ಚುನಾವಣೆಯಲ್ಲಿ ಕಣಕ್ಕೆ ಇಳಿಸಲಾಗುವುದು.

ಸದ್ಯ ಕೊರೊನಾ ಇರುವ ಕಾರಣಕ್ಕೆ ಡಿಸೆಂಬರ್​​​​ವರೆಗೆ ಯಾವುದೇ ಚುನಾವಣೆ ನಡೆಸುವುದು ಬೇಡ‌ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಚುನಾವಣಾ ಆಯೋಗ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ. ಹೀಗಾಗಿ, ಸದ್ಯ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಅನಿವಾರ್ಯವಾಗಿ ಚುನಾವಣೆ ಎದುರಿಸಬೇಕಿದೆ ಎಂದರು.

ಓದಿ: ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 21 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ

ಸಿಟಿ ರವಿ ಹೇಳಿಕೆಗೆ ತಾಳ,ತಂತಿಲ್ಲ :ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿ ಟಿ ರವಿ ಅವರ ಹೇಳಿಕೆಗೆ ತಾಳ,ತಂತಿಲ್ಲ. ರವಿ ಓರ್ವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ಈ ರೀತಿಯ ಹೇಳಿಕೆ ನೀಡುವುದು ಪಕ್ಷಕ್ಕೆ ಶೋಭೆ ತರೋದಿಲ್ಲ. ಇದು ಅವರ ಪಕ್ಷಕ್ಕೆ ಹಾನಿ, ನಮ್ಗೇನು ಆಗೋದಿಲ್ಲ. ರವಿ ಹೇಳಿಕೆಯನ್ನು ಅವರ ಪಕ್ಷದವರೇ ಸಹಿಸುವುದಿಲ್ಲ ಎಂದರು.

ABOUT THE AUTHOR

...view details