ಚಿಕ್ಕೋಡಿ(ಬೆಳಗಾವಿ): ಬೆಂಗಳೂರು, ದೆಹಲಿ ಸೇರಿದಂತೆ ಅನೇಕ ಕಡೆ ಬೆಡ್ ಇಲ್ಲದೇ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಲಾಕ್ಡೌನ್ ವಿಚಾರದಲ್ಲಿ ರಾಜಕೀಯ ಬೆರಸಬೇಡಿ; ಸತೀಶ್ ಜಾರಕಿಹೊಳಿ - ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ
ಲಾಕ್ಡೌನ್ ವಿಚಾರದಲ್ಲಿ ರಾಜಕೀಯ ಬೆರಸಬಾರದು. ತಜ್ಞರ ನಿರ್ಧಾರದ ಪ್ರಕಾರ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
Sathish Jarakiholi
ಅಂಕಲಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಚಿಕ್ಕೋಡಿ ತಾಲೂಕಿನ ಅಂಕಲಿ ಪಟ್ಟಣದಲ್ಲಿ ಡಾ. ಮಗದುಮ್ ಜೊತೆ ಶಾಸಕ ಗಣೇಶ್ ಹುಕ್ಕೇರಿಯವರು ಕೋವಿಡ್ ಆಸ್ಪತ್ರೆ ಆರಂಭ ಮಾಡಿದ್ದು ಒಳ್ಳೆಯ ವಿಚಾರ. ಈ ಭಾಗದ ಜನರಿಗಾಗಿ ಇದು ಬಹಳಷ್ಟು ಒಳ್ಳೆಯ ಕಾರ್ಯಕ್ರಮ. ಇದೆ ರೀತಿ ಬೇರೆ ಕಡೆಯಲ್ಲೂ ಆಸ್ಪತ್ರೆ ಆರಂಭ ಆಗಬೇಕು. ಬೆಡ್ ಇಲ್ಲದೇ ಪರದಾಡುವ ಪರಿಸ್ಥಿತಿ ತಪ್ಪಿ ಒಳ್ಳೆಯ ಚಿಕಿತ್ಸೆ ಸಿಗುತ್ತದೆ ಎಂದರು.
ಲಾಕ್ಡೌನ್ ವಿಚಾರದಲ್ಲಿ ರಾಜಕೀಯ ಬೆರಸಬಾರದು. ತಜ್ಞರ ನಿರ್ಧಾರದ ಪ್ರಕಾರ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.