ಬೆಳಗಾವಿ :ಬೆಲೆ ಏರಿಕೆ ತಡೆಯಲು ಕೇಂದ್ರ, ರಾಜ್ಯದಲ್ಲಿ ಜನಪರ ಸರ್ಕಾರ ಅಧಿಕಾರಕ್ಕೆ ಬರಬೇಕು. ದೇಶದಲ್ಲಿ ಅದಾನಿಗಾಗಲಿ, ಅಂಬಾನಿಗಾಗಲಿ ಸರ್ಕಾರ ಇರಬಾರದು ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಉಪಚುನಾವಣೆ ಹಿನ್ನೆಲೆ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ರೈತರು, ದಲಿತರು, ಹಿಂದುಳಿದವರು, ಜನರ ಪರ ಸರ್ಕಾರವಿರಬೇಕು. ದೆಹಲಿ ಸರ್ಕಾರ ಕೇವಲ ಎರಡ್ಮೂರು ಜನರಿಗಾಗಿ ನಡೀತಿದೆ. ಇದನ್ನ ತಡೆಯಲು ಈ ಚುನಾವಣೆ ಮೂಲಕ ಸರ್ಕಾರಕ್ಕೆ ಉತ್ತರಿಸಬೇಕು. ಜನವಿರೋಧಿ ನೀತಿ ಅನುಸರಿಸಿದರೆ ಜನ ತಕ್ಕ ಉತ್ತರ ನೀಡ್ತಾರೆ ಎಂಬ ಸಂದೇಶವನ್ನು ಈ ಚುನಾವಣೆ ಮೂಲಕ ಸಾರಬೇಕಿದೆ.