ಚಿಕ್ಕೋಡಿ: ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಲಿಸುತ್ತಾರೆ: ಈಶ್ವರ್ ಖಂಡ್ರೆ - Kpcc working President Ishwar Khandre Press Meet in Chikkodi
ಬಿಜೆಪಿಗೆ ಭ್ರಮನಿರಸನ ಆಗಿದೆ. ಸಿಎಂ ಲಿಂಗಾಯತರ ಹೆಸರಲ್ಲಿ ಮತ ಕೇಳುತ್ತಿದ್ದಾರೆ, ಅದು ತಪ್ಪು. ಅಧಿಕಾರ, ಹಣ ಬಲದಿಂದ ಯಾರು ಪಕ್ಷವನ್ನು ಬಿಟ್ಟು ಹೋಗಿದ್ದಾರೋ ಅವರಿಗೆ ಜನ ತಕ್ಕ ಪಾಠ ಕಳಿಸುತ್ತಾರೆ ಎಂದು ಚಿಕ್ಕೋಡಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
![ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಲಿಸುತ್ತಾರೆ: ಈಶ್ವರ್ ಖಂಡ್ರೆ KPCC president Ishwar Khandre Press Meet in Chikkodi](https://etvbharatimages.akamaized.net/etvbharat/prod-images/768-512-5254744-thumbnail-3x2-hrs.jpg)
ಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಉಗಾರ ಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಭ್ರಮನಿರಸನ ಆಗಿದೆ. ಸಿಎಂ ಲಿಂಗಾಯತರ ಹೆಸರಲ್ಲಿ ಮತ ಕೇಳುತ್ತಿದ್ದಾರೆ, ಅದು ತಪ್ಪು. ಅಧಿಕಾರ, ಹಣ ಬಲದಿಂದ ಯಾರು ಪಕ್ಷವನ್ನು ಬಿಟ್ಟು ಹೋಗಿದ್ದಾರೋ ಅವರಿಗೆ ಜನ ತಕ್ಕ ಪಾಠ ಕಳಿಸುತ್ತಾರೆ ಎಂದು ಹೇಳಿದರು.
ಈ ವೇಳೆ ಕಾನೂನು ಸಚಿವ ಮಾಧುಸ್ವಾಮಿಗೆ ತಿರುಗೇಟು ನೀಡಿದ ಅವರು, ಕಾನೂನು ಮಂತ್ರಿಯಾಗಿ ಜಾತಿ, ಧರ್ಮದ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ವೀರಶೈವ ಲಿಂಗಾಯತ ಜಾತ್ಯಾತೀತ ಸಮುದಾಯ. ಲಿಂಗಾಯತರು ಕೋಮುವಾದಿ ಬಿಜೆಪಿಗೆ ಮತ ಹಾಕಬೇಡಿ. ಬಿಜೆಪಿಯವರು ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಮತದಾರರನ್ನು ಕೊಂಡುಕೊಳ್ಳುತ್ತಿದ್ದಾರೆ. ಈ ಚುನಾವಣೆ ಸತ್ಯ ಮತ್ತು ಅಸತ್ಯಗಳ ಮಧ್ಯೆ ನಡೆಯುವ ಚುನಾವಣೆ. ಸತ್ಯಕ್ಕೆ, ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತೆ ಎಂದು ಹೇಳಿದರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಸಂವಿಧಾನಿಕ ಭಾಷೆಯನ್ನು ಯಾರೂ ಕೂಡ ಬಳಸಬಾರದು. ಅದು ಯಾರೇ ಆದರೂ ತಪ್ಪು ತಪ್ಪೇ ಎಂದರು.