ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ದೀಪ ಬೆಳಗಿಸುವಂತೆ ನೀಡಿದ ಕರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಕುಟುಂಬ ವಿರೋಧ ವ್ಯಕ್ತಪಡಿಸಿತು.
ದೀಪದ ಬದಲು ಬುದ್ಧ, ಬಸವ, ಅಂಬೇಡ್ಕರ್ ಫೋಟೋ ಪ್ರದರ್ಶಿಸಿದ ಜಾರಕಿಹೊಳಿ! - Satish Zarakiiholi Latest News
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಗೋಕಾಕ್ ನಗರದ ತಮ್ಮ ಮನೆಯಲ್ಲಿ ಲೈಟ್ ಆನ್ ಮಾಡಿ ಮಕ್ಕಳೊಂದಿಗೆ ಕೈಯಲ್ಲಿ ಭಿತ್ತಿ ಪತ್ರ, ಬಿ.ಆರ್. ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರ ಭಾವಚಿತ್ರ ಹಿಡಿದು ನರೇಂದ್ರ ಮೋದಿ ದೀಪ ಬೆಳಗಿಸುವಂತೆ ನೀಡಿದ ಕರೆಗೆ ವಿರೋಧ ವ್ಯಕ್ತಪಡಿಸಿದರು.
ದೀಪದ ಬದಲು ಬುದ್ಧ, ಬಸವ, ಅಂಬೇಡ್ಕರ್ ಫೋಟೊ ಪ್ರದರ್ಶಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ.
ಭಾರತಕ್ಕೆ ಬೇಕಾಗಿರುವುದು ಮಹಾ ಪುರುಷರ ಸಿದ್ಧಾಂತವೇ ಹೊರತು ದೀಪಗಳಲ್ಲ ಎಂಬ ಭಿತ್ತಿ ಪತ್ರ ಪ್ರದರ್ಶಿಸಿದರು. ಅಲ್ಲದೇ ಕುಟುಂಬದ ಯಾವ ಸದಸ್ಯರೂ ದೀಪ ಬೆಳಗಿಸದೇ ಮೋದಿ ಕರೆಗೆ ವಿರೋಧ ವ್ಯಕ್ತಪಡಿಸಿದರು.
ಜಿಲ್ಲೆಯ ಗೋಕಾಕ್ ನಗರದ ಮನೆಯಲ್ಲಿ ಅವರು ಲೈಟ್ ಆನ್ ಮಾಡಿ ಮಕ್ಕಳೊಂದಿಗೆ ಕೈಯಲ್ಲಿ ಭಿತ್ತಿ ಪತ್ರ, ಬಿ.ಆರ್.ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರ ಭಾವಚಿತ್ರ ಹಿಡಿದು ವಿಭಿನ್ನ ಸಂದೇಶ ರವಾನಿಸಿದರು.