ಬೆಳಗಾವಿ :ದೇಶದ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕೋ ಕಾಲ ಬರುತ್ತೆ ಅಂತಾ ಅದ್ಯಾರೋ ಮಂತ್ರಿ ಮಾತನಾಡಿದ್ದಾರಲ್ಲ ಎಂದು ಸಚಿವ ಈಶ್ವರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಸಚಿವ ಈಶ್ವರಪ್ಪನವರನ್ನು ವಜಾಗೊಳಿಸುವಂತೆ ಡಿಕೆಶಿವಕುಮಾರ್ ಆಗ್ರಹಿಸಿರುವುದು.. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ನಿಲುವಿನ ಬಗ್ಗೆ ರಾಹುಲ್ ಗಾಂಧಿಯವರು ಹೇಳಿದ್ದಾರೆ. ನಮ್ಮ ಸಂವಿಧಾನವೇ ನಮ್ಮ ಧರ್ಮ, ಸಂವಿಧಾನ ಚೌಕಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕು.ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು.ಮಕ್ಕಳನ್ನು ನಮ್ಮ ರಾಜಕಾರಣ ವಿಚಾರಕ್ಕೆ ಬಳಸಿಕೊಳ್ಳಬಾರದು ಎಂದರು.
ಮತದಾನ ಮಾಡುವ ಶಕ್ತಿ 18 ವರ್ಷಕ್ಕೆ ಸಿಗುವಂತೆ ರಾಜೀವ್ ಗಾಂಧಿ ಕೊಟ್ಟಿದ್ದಾರೆ. ಈಗ ಅವರ ಮನಸ್ಸುಗಳನ್ನು ಕೆಡಿಸುವ ಪ್ರಯತ್ನ ಮಾಡಬಾರದು. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಬಹಳ ಮುಖ್ಯ. ಈ ಆದ್ಯತೆ ಮೇಲೆ ನಾವೆಲ್ಲ ಸೇರಿ ಕೆಲಸ ಮಾಡಬೇಕು ಎಂದರು.
ಹಿಜಾಬ್ ವಿವಾದ ಕಾಂಗ್ರೆಸ್ ಹಿಡನ್ ಅಜೆಂಡಾ ಎಂಬ ಈರಣ್ಣಾ ಕಡಾಡಿ ಆರೋಪಕ್ಕೆ ಪ್ರತಿಕ್ರಿಯಿಸಿ, ಮಕ್ಕಳು ಎಬಿವಿಪಿಯಲ್ಲಿ ಇದ್ದರು. ಯಾರು ಗಲಾಟೆ ಮಾಡಿದ್ರು, ಎಬಿವಿಪಿ ಧರಣಿಯಲ್ಲಿದ್ದರು. ಆಮೇಲೆ ಸಿಎಸ್‌ಎಫ್ ಅಂತಾ ತೋರಿಸಿದರು. ಎಬಿವಿಪಿ ಯಾರದ್ದು? ಯಾರಿಂದ ಶುರುವಾಯಿತು ಎಂದು ಪ್ರಶ್ನಿಸಿದರು.
ರಾಷ್ಟ್ರಧ್ವಜಸ್ತಂಭಕ್ಕೆ ಯಾರು ಕೇಸರಿ ಧ್ವಜ ಹಾಕಿದ್ರು, ದೇಶದ ರಾಷ್ಟ್ರಧ್ವಜ ತಗೆದು ಕೇಸರಿ ಧ್ಚಜ ಹಾಕೋ ಕಾಲ ಬರುತ್ತೆ ಅಂತಾ ಅದ್ಯಾರೋ ಮಂತ್ರಿ ಮಾತನಾಡಿದ್ದಾರಲ್ಲ ಅವರನ್ನು ನೀವ್ಯಾಕೋ ಸುಮ್ಮನೇ ಬಿಟ್ಟಿದೀರಿ ರಾಜೀನಾಮೆ ಕೊಡಿಸಿಲ್ಲ. ರಾಜ್ಯಪಾಲರು, ಸಿಎಂ ಅವರನ್ನು ವಜಾ ಮಾಡಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.
ಇದನ್ನೂ ಓದಿ : ಹಿಜಾಬ್-ಕೇಸರಿ ಸಂಘರ್ಷವನ್ನು ದುರುಪಯೋಗ ಮಾಡಿಕೊಳ್ಳೋದು ಬೇಡ : ಸ್ಪೀಕರ್ ಕಾಗೇರಿ ಮನವಿ