ಕರ್ನಾಟಕ

karnataka

ETV Bharat / state

ಅಣ್ತಮ್ಮಂದಿರು ಎಲ್ಲರೂ ಒಂದೇ ಎಂಬ ಮನಸ್ಥಿತಿಯಿಂದ ಹೊರಗೆ ಬರಬೇಕು : ಸತೀಶ್​​ ಜಾರಕಿಹೊಳಿ‌

ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಹೀನಾಯವಾಗಿ ಸೋಲಿಸುವಲ್ಲಿ ಅವರು ಯಶಸ್ವಿಯಾದರು. ಆದ್ರೆ, ಈ ಚುನಾವಣೆಯಲ್ಲಿ ನಾಲ್ಕು ಸಾವಿರ ಮತಗಳಿಂದ ನಾವು ಗೆಲುವು ಸಾಧಿಸುತ್ತೇವೆ. ಅಣ್ಣ ತಮ್ಮಂದಿರು ಎಲ್ಲರೂ ಒಂದೇ ಎಂಬ ಮನಸ್ಥಿತಿಯಿಂದ ಹೊರಗೆ ಬರಬೇಕು. ಕಳೆದ ಬಾರಿ ನನ್ನ ಸೋಲಿಸಿದ್ದಾರೆ. ಅದನ್ನು ಈಗ ನಾವು ಪಡೆದುಕೊಳ್ಳಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ‌ ಹೇಳಿದರು.

ಸತೀಶ್​​ ಜಾರಕಿಹೊಳಿ‌
ಸತೀಶ್​​ ಜಾರಕಿಹೊಳಿ‌

By

Published : Dec 5, 2021, 8:41 PM IST

ಚಿಕ್ಕೋಡಿ : ಅಣ್ಣ ತಮ್ಮಂದಿರು ಎಲ್ಲರೂ ಒಂದೇ ಎಂಬ ಮನಸ್ಥಿತಿಯಿಂದ ಮತದಾರರು ಹೊರ ಬರಬೇಕು. ‌ಕಳೆದ ಬಾರಿ ಲೋಕಸಭೆ ಚುನಾವಣೆ ವೇಳೆ ನನ್ನ ಸೋಲಿಸಿದ್ದಾರೆ. ಅದನ್ನು ಈಗ ನಾವು ಪಡೆದುಕೊಳ್ಳಬೇಕಾಗಿದೆ. ರಮೇಶ್ ಅವರನ್ನ ಲಖ‌ನ್ ಅವರನ್ನ ಗೆಲ್ಲಿಸುವುದು ನನ್ನ ಕನಸಿನಲ್ಲಿಯೂ ಸಹ ಇಲ್ಲವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ‌ ಸ್ಪಷ್ಟಪಡಿಸಿದರು.

ರಾಯಬಾಗದಲ್ಲಿ ನಡೆದ ಕಾಂಗ್ರೆಸ್​ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ, ಪಕ್ಷೇತರ ಅಭ್ಯರ್ಥಿಯ ಬಗ್ಗೆ ಸಿದ್ದರಾಮಯ್ಯ ಆರೋಪ ಮಾಡಿದಂತೆ ಲಖನ್ ಜಾರಕಿಹೊಳಿ ಜಾಗದಲ್ಲಿ ವಿವೇಕರಾವ್ ಪಾಟೀಲ್ ಸ್ಪರ್ಧಿಸಿದ್ದರೆ ಈ ಗೊಂದಲವೇ ಇರ್ತಿರಲಿಲ್ಲ. ಗೋವಿಂದ್​​ ಕಾರಜೋಳ ಜನವರಿ 10ಕ್ಕೆ ಚುನಾವಣೆ ಅಂತ ತಿಳಿದುಕೊಂಡಿರಬೇಕು ಎಂದು ವ್ಯಂಗ್ಯವಾಡಿದರು.

ರಮೇಶ್ ಜಾರಕಿಹೊಳಿ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ

ಕಾರಜೋಳ ಇನ್ನೂ ಕೂಡ ಎಲ್ಲೂ ಪತ್ತೆ ಇಲ್ಲ. ಸಚಿವ ಉಮೇಶ್ ಕತ್ತಿ, ಮಾಜಿ ಡಿಸಿಎಂ ಸವದಿ ಬೆಂಗಳೂರಿನಲ್ಲಿದ್ದಾರೆ. ಬಿಜೆಪಿಯಿಂದ ಇಬ್ಬರು ಸ್ಪರ್ಧೆ ಮಾಡಿದ್ದಾರೆ. ಒಬ್ಬರು ಎ ಟೀಮ್, ಇನ್ನೊಬ್ಬರು ಬಿ ಟೀಮ್. ಸದ್ಯ ಗೊಂದಲ ಮಾಡೋರೆಲ್ಲರೂ ಈಗ ಬಿಜೆಪಿಯಲ್ಲಿದ್ದಾರೆ ಎಂದು ಕುಟುಕಿದರು.

ಗೋಕಾಕ್​​ ದಲ್ಲಿ ನಾನೇ ಚುನಾವಣಾ ಏಜೆಂಟ್ ಆಗುತ್ತಿದ್ದೇನೆ. ಏಜೆಂಟ್ ಆಗದಿದ್ದರೆ ನೂರಕ್ಕೆ ನೂರು ವೋಟು ಲಖನ್ ಗೆ ಬೀಳುತ್ತವೆ. ಹೀಗಾಗಿ ನಾನು ಏಜೆಂಟ್ ಆಗುತ್ತಿದ್ದೇನೆ. ನನ್ನ ಮಕ್ಕಳು ಸಹ ಬೂತ್ ಏಜೆಂಟ್​ಗಳಾಗುತ್ತಿದ್ದಾರೆ. ಅಣ್ಣ ತಮ್ಮಂದಿರು ಒಂದೇ ಎಂಬ ಮನಸ್ಥಿತಿ ಬಿಟ್ಟು ಇಲ್ಲಿಂದ ನೀವು ಹೊರಡಬೇಕು. ಕಾಂಗ್ರೆಸ್​ಸ್ ಅಭ್ಯರ್ಥಿ ಚೆನ್ನರಾಜ್ ಹಟ್ಟಿಹೊಳಿ ಗೆಲ್ಲಿಸಬೇಕೆಂದು ಸತೀಶ್ ಮನವಿ ಮಾಡಿದರು.

ರಮೇಶ್ ಜಾರಕಿಹೊಳಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಏಕವಚನದಲ್ಲಿಯೇ ರಮೇಶ್ ವಿರುದ್ಧ ಸಿದ್ದರಾಮಯ್ಯ ಗುಡುಗು:ಸಾಮಾಜಿಕ ನ್ಯಾಯ ಅಂದ್ರೇನೆ ಏ‌ನು ಅನ್ನೋದೆ ಗೊತ್ತಿಲ್ಲದ ಮಿಸ್ಟರ್ ರಮೇಶ್ ಜಾರಕಿಹೊಳಿ, ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡ್ತೀಯಾ ನಾಚಿಕೆ ಆಗಲ್ವಾ ನಿಂಗೆ ಎಂದು ಏಕವಚನದಲ್ಲಿ ರಮೇಶ್ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.

ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯ ನೋಡಲ್ಲ ಅಂತಾರೆ. ಅವರಿಗೆ ಬಹುಶಃ ಸಾಮಾಜಿಕ ನ್ಯಾಯ ಅಂದರೆ ಏನು ಅಂತಾನೇ ಗೊತ್ತಿಲ್ಲ. ಇತಿಹಾಸ ತಿಳಿದುಕೊಳ್ಳದವರು ಇತಿಹಾಸ ಸೃಷ್ಟಿಸಲಾರರು. ವಿವೇಕ್​​ ರಾವ್ ಗೆ ಟಿಕೆಟ್ ಕೊಡಲಿಲ್ಲಾ ಅಂತಾ ರಮೇಶ್ ಹೇಳ್ತಾನೆ. ಅವರು ನಮ್ಮ ಪಕ್ಷದಲ್ಲಿ ಇರಲಿಲ್ಲ. ಅದಕ್ಕಾಗಿ ಟಿಕೆಟ್ ಕೊಡಲಿಲ್ಲ. ನೀನ್ಯಾಕೆ ನಿನ್ನ ತಮ್ಮನನ್ನ ನಿಲ್ಲಿಸಿದೆ. ವಿವೇಕ್ ರಾವ್ ಪಾಟೀಲ್​​​ನನ್ನೇ ನಿಲ್ಲಿಸಬೇಕಿತ್ತಲ್ಲ..? ಡೋಂಗಿತನ ಮಾಡ್ತಿರಾ ಇಲ್ಲಿ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಕೊಡಬೇಕು ಎಂದು ಕಾಂಟ್ರಾಕ್ಟರ್ ಅಸೋಸಿಯೇಷನ್ ಹೇಳುತ್ತಿದೆ. ರಮೇಶ್ ಜಾರಕಿಹೊಳಿ ಇದೆಲ್ಲ ಗೊತ್ತೆನಪ್ಪ ನಿಂಗೆ ಎಂದು ಸಿದ್ದರಾಮಯ್ಯ ಹರಿಹಾಯ್ದರು. ಈ ಬಾರಿ ತಾಪಂ, ಜಿಪಂ ಸದಸ್ಯರು ಈ ಚುನಾವಣೆಯಲ್ಲಿ ಮತ ನೀಡುತ್ತಿಲ್ಲ. ಯಾಕಂದ್ರೆ ಬಿಜೆಪಿ ಸರ್ಕಾರ ಚುನಾವಣೆ ನಡೆಸದೆ ಮುಂದೂಡಿದೆ. ಹೀಗಾಗಿ ತಾ.ಪಂ ಸದಸ್ಯರು ಜಿ.ಪಂ ಸದಸ್ಯರು ಈ ಬಾರಿ ವೋಟ್ ಹಾಕುತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎರಡೂ ಬಿಜೆಪಿಯೇ ಆಗಿವೆ. ಆದರೆ, ಅವರು ಯಾವತ್ತಾದರೂ ಅಧಿಕಾರ ವಿಕೇಂದ್ರಿಕರಣದ ಬಗ್ಗೆ ಮಾತಾಡಿದ್ದಾರಾ? ಎಂದು ಪ್ರಶ್ನಿಸಿದರು,

ಪ್ರಧಾನಿ ನರೇಂದ್ರ ಮೋದಿಯವರು ಬಂದು 7 ವರ್ಷ ಆಯ್ತು, ಒಂದು ರೂಪಾಯಿ ತಾ.ಪಂ, ಜಿ.ಪಂ, ಮುನಿಸಿಪಾಲಿಟಿಗೆ ಅನುದಾನ ನೀಡಿಲ್ಲ. ಹೀಗಿರುವ ಬಿಜೆಪಿಯವರಿಗೆ ಮತ ಕೇಳುವ ಯಾವ ನೈತಿಕತೆಯೂ ಇಲ್ಲ. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವವೇ ಇಲ್ಲ. ಬಾಬಾಸಾಹೇಬ್ ಅಂಬೇಡ್ಕರ ಬರೆದ ಸಂವಿಧಾನ ಬದಲಾವಣೆ ಮಾಡಬೇಕು ಅಂತಾರೆ. ಮಹಿಳೆಯರಿಗೆ 50 ಪರ್ಸಂಟ್ ಮೀಸಲಾತಿ ನೀಡಿದ್ದು ಕಾಂಗ್ರೆಸ್​ ಪಕ್ಷ ಪ.ಪಂ, ಪ.ಜಾತಿಯವರಿಗೆ 73/74 ನೇ ತಿದ್ದುಪಡಿ ಆದ್ಮೇಲೆ ಅವರಿಗೂ ಸಹ ಮೀಸಲಾತಿ ನೀಡಿದೆ. ಹಾಗಾಗಿ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ, ಬಿಜೆಪಿಗೆ ವೋಟ್​​​ ಹಾಕಬೇಡಿ‌ ಎಂದು ಮನವಿ ಮಾಡಿದರು.

ABOUT THE AUTHOR

...view details