ಕರ್ನಾಟಕ

karnataka

ETV Bharat / state

ಅತ್ಯಾಚಾರಿಗೆ ಉಗ್ರ ಶಿಕ್ಷೆ ನೀಡಲು ಒತ್ತಾಯ: ಕಡೋಲಿ ಗ್ರಾಮ ಸಂಪೂರ್ಣ ಬಂದ್ - kodoli village bandh news

ಅಪ್ರಾಪ್ತೆ ಮೇಲೆ‌ ಅತ್ಯಾಚಾರ ಎಸಗಿದವನಿಗೆ ಉಗ್ರ ಶಿಕ್ಷೆ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಡೋಲಿ ಗ್ರಾಮದಲ್ಲಿ ಸಂಪೂರ್ಣ ಬಂದ್​​ ನಡೆಸಲಾಗಿದೆ.

bandh
ಕಡೋಲಿ ಗ್ರಾಮ ಸಂಪೂರ್ಣ ಬಂದ್

By

Published : Dec 13, 2019, 11:52 AM IST

ಬೆಳಗಾವಿ:ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯಿಸಿ ಸ್ಥಳೀಯರು ಸ್ವಯಂಪ್ರೇರಿತರಾಗಿ ಕಡೋಲಿ ಗ್ರಾಮದ ಬಂದ್​​​ಗೆ ಕರೆಕೊಟ್ಟಿದ್ದಾರೆ.

ಗ್ರಾಮದ ಎಲ್ಲ ಶಾಲೆಗಳು ಬಂದ್ ಆಗಿದ್ದು, ಅಂಗಡಿ ಮುಂಗಟ್ಟುಗಳನ್ನು ಸ್ಥಳೀಯರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ. ಬಸ್ ಸೇರಿದಂತೆ ‌ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಮುನ್ನೆಚ್ಚರಿಕಾ ‌ಕ್ರಮವಾಗಿ ಅಗತ್ಯ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಪ್ರಕರಣವನ್ನು ಖಂಡಿಸಿ ಇದೇ 12ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಕಡೋಲಿ ಗ್ರಾಮ ಸಂಪೂರ್ಣ ಬಂದ್

ಆಟ ಆಡಿಸುವುದಾಗಿ ಹೇಳಿ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದಿದ್ದ ಸುನೀಲ ಬಾಳನಾಯಿಕ (26) ಎಂಬಾತ ಅತ್ಯಾಚಾರ ಎಸಗಿದ್ದ.

ಆರೋಪಿಯನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದೊಯ್ಯುವಾಗಲೂ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದರು. ಆರೋಪಿ ಮೇಲೆ ಹಲ್ಲೆಗೆ ಯತ್ನಿಸಿದ್ದ ಸ್ಥಳೀಯರನ್ನು ವಶಕ್ಕೆ ಪಡೆದ ಪೊಲೀಸರ ಕ್ರಮದ ವಿರುದ್ಧ ರಸ್ತೆ ತಡೆದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ABOUT THE AUTHOR

...view details