ಕರ್ನಾಟಕ

karnataka

ETV Bharat / state

4 ದಿನಗಳ ಪಂದ್ಯವನ್ನು 3 ದಿನದಲ್ಲಿ ಮುಗಿಸಿದ ದ್ರಾವಿಡ್​ ಬಾಯ್ಸ್​... ಲಂಕಾ ವಿರುದ್ಧ 205ರನ್​ಗಳ ಇನ್ನಿಂಗ್ಸ್​ ಜಯ - unofficial Test

ಶ್ರೀಲಂಕಾ ಎ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್​ ಪಂದ್ಯದಲ್ಲಿ ಭಾರತ ಎ ತಂಡ ಇನ್ನಿಂಗ್ಸ್​ ಹಾಗೂ 205 ರನ್​ಗಳ ಬೃಹತ್​ ಜಯ ಸಾಧಿಸಿದೆ.

t

By

Published : May 27, 2019, 10:50 PM IST

ಬೆಳಗಾವಿ: ಬೆಳಗಾವಿಯ ಆಟೋನಗರದ ಕೆಎಸ್​ಸಿಎ ಮೈದಾನದಲ್ಲಿ ಉದ್ಘಾಟನಾ ಪಂದ್ಯದಲ್ಲೇ ಭಾರತ ಎ ತಂಡ ಶ್ರೀಲಂಕಾ ಎ ತಂಡವನ್ನು ಇನ್ನಿಂಗ್ಸ್​ ಹಾಗೂ 205 ರನ್​ಗಳ ಬೃಹತ್​ ಅಂತರದಿಂದ ಮಣಿಸಿದೆ.

ನಾಲ್ಕುದಿನಗಳ ಕಾಲ ನಡೆಯಬೇಕಿದ್ದ ಅನಧಿಕೃತ ಟೆಸ್ಟ್​ ಪಂದ್ಯ ಮೂರೇ ದಿನದಲ್ಲಿ ಮುಕ್ತಾಯಗೊಂಡಿತು. ಮೊದಲೆರಡು ದಿನ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದ ಭಾರತ ಎ ತಂಡ 622 ರನ್​ಗಳ ಬೃಹತ್​ ಮೊತ್ತ ಕಲೆಹಾಕಿ ಮೊದಲ ಇನಿಂಗ್ಸ್​ ಡಿಕ್ಲೇರ್​ ಘೋಷಿಸಿಕೊಂಡಿತು. ಭಾರತ ತಂಡದ ಪರ ಅಭಿಮನ್ಯು ಈಶ್ವರನ್ (233) ದ್ವಿಶತಕ, ಪ್ರಿಯಾಂಕ ಪಾಂಚಾಲ್ (155) ಹಾಗೂ ಅನಮೋಲ್ ಪ್ರೀತ್ ಸಿಂಗ್ ಅಜೇಯ (116) ಶತಕ ಮತ್ತು ಎಸ್.ಡಿ.‌ಲಾಡ್ (76) ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

622 ರನ್​ಗಳನ್ನು ಹಿಂಬಾಲಿಸಿದ ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಭಾರತೀಯರ ದಾಳಿಗೆ ಸಿಲುಕಿ 232 ರನ್​ಗಳಿಗೆ ಆಲೌಟ್​ ಆಯಿತು. ಲಂಕಾ ಪರ‌ ಅನುಭವಿ ನಿರೋಷನ್‌ ಡಿಕ್ವೆಲ್ಲಾ (103) ಶತಕ‌ ಸಿಡಿಸಿ‌ ಗಮನ‌ ಸೆಳೆದರು.

ಭಾರತ ಎ ತಂಡ

ಎರಡನೇ ಇನ್ನಿಂಗ್ಸ್​ನಲ್ಲು ರನ್​ಗಳಿಸಲು ಪರದಾಡಿದ ಲಂಕಾ 185 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಇನ್ನಿಂಗ್ಸ್​ ಸೋಲುಕಂಡಿತು.

ಬ್ಯಾಟ್ಸಮನ್​ಗಳಿಗೆ ಸಹಕಾರಿಸಿದ ಈ ಮೈದಾನ‌ ಬೌಲರ್​ಗಳಿಗೂ ಅನುಕೂಲ ‌ಕಲ್ಪಿಸಿದೆ. ಮೂರು ದಿನದಲ್ಲಿ‌ ಒಂದೂವರೆ ದಿನ‌ ಬ್ಯಾಡಿಂಗ್ ಆಡಿದ ಭಾರತ 5 ವಿಕೆಟ್ ‌ಕಳೆದುಕೊಂಡರೆ ಉಳಿದ ಒಂದೂವರೆ ದಿನ‌ ಆಡಿದ‌ ಶ್ರೀಲಂಕಾ ‌20 ವಿಕೆಟ್ ಕಳೆದುಕೊಂಡಿತು.

ಭಾರತದ ಅದ್ಭುತ ಬೌಲಿಂಗ್​ ಮಾಡಿದ ಐಪಿಎಲ್​ನ ಮುಂಬೈ ಹೀರೋ ರಾಹುಲ್​ ಚಹಾರ್​ ಎರಡೂ ಇನ್ನಿಂಗ್ಸ್‌ನಲ್ಲಿ ತಲಾ 4 ವಿಕೆಟ್​ ಪಡೆದು ಗಮನ ಸೆಳೆದರು.‌ ಜಯಂತ್​ ಯಾದವ್ ಒಟ್ಟು 4, ಶಿವಂ ದುಬೆ 4, ಸಂದೀಪ್​ ವಾರಿಯರ್​ 4, ರಜಪೂತ್​ 2 ವಿಕೆಟ್ ಕಬಳಿಸಿ ಲಂಕಾ ಬ್ಯಾಟ್ಸಮನ್ ಗಳನ್ನು‌ ಕಾಡಿದರು.

ಎರಡನೇ ಹಾಗೂ ಕೊನೆಯ ಅನಧಿಕೃತ ಟೆಸ್ಟ್​ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಮೇ 31ರಿಂದ ಆರಂಭವಾಗಲಿದೆ.

ABOUT THE AUTHOR

...view details