ಕರ್ನಾಟಕ

karnataka

ETV Bharat / state

ಕಮಲಕ್ಕೆ ಸೆಡ್ಡು ಹೊಡೆಯುತ್ತಾ ತೆಂಗಿನ ತೋಟ? ‘ಮಹೇಶ’ಗೆ ಬಿಸಿ ತುಪ್ಪವಾದ್ರಾ ‘ವಿನಾಯಕ’! - ಅಥಣಿ ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ

ಕೆಜೆಪಿ ಪಕ್ಷದ ತೆಂಗಿನ ಮರಗಳ ತೋಟ ನೋಡಿ ಅಥಣಿ ಬಿಜೆಪಿ ವಲಯದಲ್ಲಿ ತಳಮಳ ಸೃಷ್ಟಿಯಾಗಿದೆ ಎನ್ನಲಾಗಿದೆ. ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ರಾ? ಎಂಬ ಪ್ರಶ್ನೆ ಕಾಡ್ತಿದೆ.

ಅಥಣಿ ಉಪಚುನಾವಣೆ ಸುದ್ದಿ

By

Published : Nov 22, 2019, 2:06 PM IST

ಬೆಳಗಾವಿ (ಅಥಣಿ) :ಕೆಜೆಪಿ ಪಕ್ಷದ ತೆಂಗಿನ ಮರಗಳ ತೋಟ ನೋಡಿ ಅಥಣಿ ಬಿಜೆಪಿ ವಲಯದಲ್ಲಿ ತಳಮಳ ಸೃಷ್ಟಿಯಾಘಿದೆ ಎನ್ನಲಾಗಿದೆ. ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ರಾ? ಎಂಬ ಪ್ರಶ್ನೆ ಕಾಡ್ತಿದೆ.

ಅಥಣಿ ವಿಧಾನಸಭಾ ಉಪ ಚುನಾವಣೆಯಲ್ಲಿ ತಂತ್ರಗಾರಿಕೆ, ರಾಜಕೀಯ ಲೆಕ್ಕಾಚಾರ ಕೂಡ ಕೆಲವೊಮ್ಮೆ ತಲೆ ಕೆಳಗಾದ ಉದಾಹರಣೆಗಳಿವೆ. ಅಥಣಿ ಉಪಚುನಾವಣೆ ಈ ಬಾರಿ ಜಿದ್ದಾಜಿದ್ದಿಯ ಕಣವಾಗಿದೆ. ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಮಹೇಶ್​ ಕುಮಟಳ್ಳಿಗೆ ಬಂಡಾಯದ ಬಾವುಟ ಪ್ರದರ್ಶನ ಮಾಡಿರುವ ಬಿಜೆಪಿ ಜಿಲ್ಲಾ ಪಂಚಾಯ್ತಿ ಸದಸ್ಯ ಗುರು ದಾಶ್ಯಾಳ ನಿನ್ನೆ ಜೆಡಿಎಸ್​ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿಗೆ ರಿಲೀಫ್ ಸಿಕ್ಕಂತಾಗಿದೆ.

ಸದ್ಯ ಬಿಜೆಪಿ ವಲಯದಲ್ಲಿ ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆಯಂತೆ. ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ ಅಥಣಿ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಯುವ ಪತ್ರಕರ್ತನ ಈ ಪೈಪೋಟಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟ್ಟಳ್ಳಿಗೆ ನೇರವಾಗಿ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗ್ತಿದೆ. ಡಿಸೆಂಬರ್​ 5 ರಂದು ಅಥಣಿಯ ಮತದಾರರು ಯಾರ ಕೈ ಹಿಡಿಯಲಿದ್ದಾರೆ? ಎಂಬುದನ್ನು ಮಾತ್ರ ಕಾದು ನೋಡಬೇಕು.

ABOUT THE AUTHOR

...view details