ಕಿತ್ತೂರು ಕರ್ನಾಟಕದ ಮೊದಲ ಕಿರು ಮೃಗಾಲಯ ಸಾರ್ವಜನಿಕರಿಗೆ ಮುಕ್ತವಾಗಿದೆ. ಇದರ ಕುರಿತಾಗಿ ಸಚಿವ ಗೋವಿಂದ ಕಾರಜೋಳ ಮಾತನಾಡಿದರು. ಬೆಳಗಾವಿ: ಭೂತರಾಮಟ್ಟಿ ಗ್ರಾಮದಲ್ಲಿ 80 ಎಕರೆ ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಿತ್ತೂರು ಕರ್ನಾಟಕದ ಮೊದಲನೇ ಮೃಗಾಲಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ಕಿತ್ತೂರ ಕರ್ನಾಟಕದಲ್ಲಿ ಮೊದಲ ಮೃಗಾಲಯ ಉದ್ಘಾಟನೆಯಾಗಿದೆ. ಹುಲಿ ಸಫಾರಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದ್ದು ಅಚ್ಚುಕಟ್ಟಾಗಿ ಮೃಗಾಲಯ ಸ್ಥಾಪಿಸಲಾಗಿದೆ. ರಾಷ್ಟ್ರೀಯ ಮೃಗಾಲಯ ಪ್ರಾಧಿಕಾರದಿಂದ 35 ಪ್ರಾಣಿಗಳನ್ನು ಇಲ್ಲಿರಿಸಲು ಅನುಮತಿ ಸಿಕ್ಕಿದೆ. ಹುಲಿ, ಸಿಂಹ, ಕರಡಿ ಹಲವು ಪಕ್ಷಿಗಳು ಸೇರಿ ಒಟ್ಟು 24 ಪ್ರಾಣಿ ಮತ್ತು ಪಕ್ಷಿಗಳನ್ನು ಈಗಾಗಲೇ ತಂದಿದ್ದೇವೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಇದೇ ವೇಳೆ, ಮೈಸೂರಿಗೆ ಪ್ರಾಣಿಗಳನ್ನು ನೋಡಲು ಹೋಗುವ ಬದಲು ಇಲ್ಲಿಗೆ ಬರುವಂತೆ ಬೆಳಗಾವಿ ಉಸ್ತುವಾರಿ ಸಚಿವರೂ ಆದ ಕಾರಜೋಳ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮೂಲಭೂತ ಸೌಕರ್ಯಗಳಿಗೆ 5 ಕೋಟಿ ರೂ ಅನುದಾನ ಬೇಕಾಗಿದೆ. ಮುಖ್ಯಮಂತ್ರಿಯವರು ಇಂದೇ ಅನುದಾನ ಕೊಡುವ ಭರವಸೆ ನೀಡಿದ್ದಾರೆ. ನನ್ನ 72 ವರ್ಷಗಳಲ್ಲಿ ಇಂಥ ಹುಲಿ ನೋಡಿಲ್ಲ, ಅಂಥ ಹುಲಿ ನಮ್ಮ ಮೃಗಾಲಯದಲ್ಲಿದೆ ಎಂದರು.
ಇದನ್ನೂ ಓದಿ: ಮಾಜಿ ಸಚಿವರ ರೈಸ್‌ಮಿಲ್‌ನಲ್ಲಿ ವನ್ಯಜೀವಿಗಳು ಪತ್ತೆ ಕೇಸ್: ಅರಣ್ಯ ಇಲಾಖೆ ಕಚೇರಿಗೆ ಬಿಜೆಪಿ ಮುತ್ತಿಗೆ