ಕರ್ನಾಟಕ

karnataka

ETV Bharat / state

ಎಫ್‌ಡಿಎ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣದ ಕಿಂಗ್ ಪಿನ್ ಶಿವಲಿಂಗ್ ಪಾಟೀಲ್ ಕಚೇರಿ, ಮನೆ ಮೇಲೆ ಸಿಸಿಬಿ ದಾಳಿ - ಎಫ್‌ಡಿಎ ಪ್ರಶ್ನೆಪತ್ರಿಕೆ ಕಿಂಗ್ ಪಿನ್ ಶಿವಲಿಂಗ್

ಶಿವಲಿಂಗ ಪಾಟೀಲ್ ಅವರ ಸ್ವಗ್ರಾಮ ನಲ್ಲಾನಟ್ಟಿಯಲ್ಲೂ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಬಗ್ಗೆ ಅಂಗಡಿ ಹಾಗೂ ಮನೆಯಲ್ಲಿ ಹಲವು ಮಾಹಿತಿಗಳನ್ನು ಸಂಗ್ರಹ ಮಾಡಿದ್ದಾರೆ..

ಸಿಸಿಬಿ ದಾಳಿ
ಸಿಸಿಬಿ ದಾಳಿ

By

Published : Feb 23, 2021, 4:22 PM IST

ಬೆಳಗಾವಿ :ಎಫ್‌ಡಿಎ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣದ ಕಿಂಗ್ ಪಿನ್ ಶಿವಲಿಂಗ್ ಪಾಟೀಲ್ ಕಚೇರಿ ಹಾಗೂ ಮನೆಯಲ್ಲಿ ಸಿಸಿಬಿ ಪೊಲೀಸರು ಶೋಧ‌‌ ನಡೆಸಿ ಹಲವು ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿರುವ ಎಸ್‌ಎಂಕೆ ಫರ್ನಿಚರ್ ಪ್ರೈವೆಟ್ ಲಿಮಿಟೆಡ್ ಕಚೇರಿ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು,‌ ಪ್ರಶ್ನೆ ಪತ್ರಿಕೆ ಲೀಕ್ ವಿಚಾರಕ್ಕೆ ಸಂಬಂಧಪಟ್ಟ ಹಲವು ದಾಖಲಾತಿಗಳ ಕುರಿತು ಪರಿಶೀಲಿಸುತ್ತಿದ್ದಾರೆ.

ಇದಲ್ಲದೇ ಶಿವಲಿಂಗ ಪಾಟೀಲ್ ಅವರ ಸ್ವಗ್ರಾಮ ನಲ್ಲಾನಟ್ಟಿಯಲ್ಲೂ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಬಗ್ಗೆ ಅಂಗಡಿ ಹಾಗೂ ಮನೆಯಲ್ಲಿ ಹಲವು ಮಾಹಿತಿಗಳನ್ನು ಸಂಗ್ರಹ ಮಾಡಿದ್ದಾರೆ. ಶೋಧ ಕಾರ್ಯ ಇನ್ನೂ ಮುಂದುವರೆದಿದೆ.

ABOUT THE AUTHOR

...view details