ಬೆಳಗಾವಿ:ಮೂಡಲಗಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಮೂಡಲಗಿ ಪಟ್ಟಣದ ಗವಿ ತೋಟದ ಆನಂದ ಶರತ್ ಚೌಗಲಾ(25), ಕಲ್ಲಪ್ಪ ಮಲ್ಲಿಕಾರ್ಜನ ಬಿಸನಕೊಪ್ಪ (27), ಬಸವರಾಜ ಶ್ರೀಕಾಂತ ನಿಡಗುಂದಿ (26) ಬಂಧಿತರು.
ಪಟ್ಟಣದ ಗೋಕಾಕ್ ಕ್ರಾಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮೂವರನ್ನು ಪೊಲೀಸರು ತಡೆಯಲು ಯತ್ನಿಸಿದಾಗ ಬೈಕ್ ನಿಲ್ಲಿಸದೇ ಪರಾರಿಯಾಗುತ್ತಿದ್ದರು. ಹಿಂಬಾಲಿಸಿ ಹಿಡಿದ ಪೊಲೀಸರು ವಿಚಾರಣೆ ನಡೆಸಿದಾಗ 6 ತಿಂಗಳಿನಿಂದ 9 ಬೈಕ್ ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.