ಚಿಕ್ಕೋಡಿ/ಬೆಳಗಾವಿ:ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮಸ್ಥರು ಅನಧಿಕೃತವಾಗಿ ಮತದಾರ ಪಟ್ಟಿಯಲ್ಲಿ ವಾರ್ಡ್ಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿ ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ಮಾಡಿದ್ದಾರೆ.
ವೋಟ್ ಬ್ಯಾಂಕ್ಗಾಗಿ ಅನಧಿಕೃತವಾಗಿ ಮತದಾರರ ಸೇರ್ಪಡೆ ಆರೋಪ: ಜನರ ಪ್ರತಿಭಟನೆ - latest protest in chikkodi
ಮತಗಳನ್ನು ಸಂಪಾದಿಸುವ ಉದ್ದೇಶದಿಂದ ಅನಧಿಕೃತವಾಗಿ ಬೇರೆ ವಾರ್ಡ್ಗಳಲ್ಲಿ ಮತದಾರರನ್ನು ಸೇರ್ಪಡೆ ಮಾಡಿಕೊಳ್ಳಲಾಗ್ತಿದೆ ಎಂದು ಆರೋಪಿಸಿ ಚಿಕ್ಕೋಡಿಯಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ.
ಅನಧಿಕೃತವಾಗಿ ಹಾಗೂ ಒತ್ತಾಯ ಪೂರ್ವಕವಾಗಿ ಮತದಾರರ ಪಟ್ಟಿಯಲ್ಲಿ ವಾರ್ಡ್ಗಳನ್ನು ಬದಲಾಯಿಸಿ ಮತದಾರರನ್ನು ಅದಲು ಬದಲು ಮಾಡಲಾಗಿದೆ ಎಂದು ದೂರಿದ್ದಾರೆ. ಖಡಕಲಾಟ ಗ್ರಾಮದ ಭಾಗ ಸಂಖ್ಯೆ 135, 147, 148 ರಲ್ಲಿ ಇರುವ ಗ್ರಾಮಸ್ಥರನ್ನು ಒತ್ತಾಯ ಪೂರ್ವಕವಾಗಿ ಭಾಗ ಸಂಖ್ಯೆ 143 ರಲ್ಲಿ ಸೇರ್ಪಡೆ ಮಾಡಲಾಗಿದೆ ಎನ್ನಲಾಗ್ತಿದೆ. ಈ ಹಿನ್ನೆಲೆ ನೂರಾರು ಗ್ರಾಮಸ್ಥರು ಪ್ರತಿಭಟನೆ ಮಾಡಿ ನ್ಯಾಯ ದೊರಕಿಸಿಕೊಡಿ ಎಂದು ಘೋಷಣೆ ಕೂಗಿದ್ರು.
ಅನಧಿಕೃತವಾಗಿ ಭಾಗ ಸಂಖ್ಯೆ 143 ರಲ್ಲಿ ಸೇರಿಸಲು ಮನೆ ನಂಬರ್, ವಿದ್ಯುತ್ ಬಿಲ್ ಹಾಗೂ ಪಡಿತರ ಚೀಟಿ ಮಾಡಿಕೊಡಲು ಗ್ರಾಮದ ಜನರ ಸಹಿಗಳನ್ನು ಸಹ ನಕಲು ಮಾಡಿ ದಾಖಲೆಗಳನ್ನು ಸೃಷ್ಟಿಸುತ್ತಾರೆ. ರಾಜಕೀಯ ಕುತಂತ್ರದಿಂದ ಈ ರೀತಿ ಇಲ್ಲಸಲ್ಲದ ಬದಲಾವಣೆ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.