ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಯೋಧ ಸೇನೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸೇನೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಕರೋಶಿ ಗ್ರಾಮದ ಯೋಧ ಸಾವು - ಯೋಧ ಅನಿಲ ಶಿವಾಜಿ ಶಿಂಗಾಯಿ
ಕರೋಶಿ ಗ್ರಾಮದ ಯೋಧನೋರ್ವ ಸೇನೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕರೋಶಿ ಗ್ರಾಮದ ಯೋಧ ಅನಿಲ ಶಿವಾಜಿ ಶಿಂಗಾಯಿ
ಗ್ರಾಮದ ಅನಿಲ ಶಿವಾಜಿ ಶಿಂಗಾಯಿ (23) ಮೃತ ಯೋಧ. ಇವರು ಕಳೆದ 18 ತಿಂಗಳ ಹಿಂದೆ ಸೇನೆಗೆ ಸೇರ್ಪಡೆಯಾಗಿದ್ದರು. ಲಾಕ್‌ಡೌನ್ ಇದ್ದ ಕಾರಣ ಊರಲ್ಲಿದ್ದ ಇವರು ಕಳೆದ ಒಂದು ತಿಂಗಳ ಹಿಂದೆಯೆ ಕರ್ತವ್ಯಕ್ಕೆ ಹಾಜರಾಗಿದ್ದರು. ದೆಹಲಿಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ದೆಹಲಿ ಕಡೆ ದೌಡಾಯಿಸಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಕರೋಶಿಗೆ ಯೋಧನ ಪಾರ್ಥೀವ ಶರೀರ ಬರಲಿದೆ.