ಕರ್ನಾಟಕ

karnataka

ETV Bharat / state

ಬೆಳಗಾವಿ ಗಡಿಯಲ್ಲಿ ಸಹಾಯಕ್ಕೆ ಮೊರೆ ಇಡುತ್ತಿರುವ ತಾಯ್ನಾಡಿನ ಕಾರ್ಮಿಕರು - Workers stuck at the border

ಲಾಕ್​ಡೌನ್​ ಜಾರಿಯಾದ ಬಳಿಕ ತಾಯ್ನಾಡಿನ ಕಾರ್ಮಿಕರು ಮಹಾರಾಷ್ಟ್ರದಿಂದ ಕರ್ನಾಟಕದತ್ತ ಮುಖಮಾಡಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಳಗಾವಿಯ ನಿಪ್ಪಾಣಿ ತಾಲೂಕಿನ ಕೊಗನೊಳಿ ಟೂಲ್ ನಾಕಾ ಬಳಿ 30ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದು, ತವರಿಗೂ ಬರಲಾಗದೆ ಮಹಾರಾಷ್ಟ್ರಕ್ಕೂ ತೆರಳಲಾಗದೇ ಅತಂತ್ರ ಸ್ಥಿತಿಯಲ್ಲಿದ್ದಾರೆ.

karnataka workers stuck at Maharashtra belagavi border
ಬೆಳಗಾವಿ ಗಡಿಯಲ್ಲಿ ಸಹಾಯಕ್ಕೆ ಮೊರೆ ಇಡುತ್ತಿದ್ದಾರೆ ಕರುನಾಡ ಕಾರ್ಮಿಕರು

By

Published : May 19, 2020, 9:13 PM IST

ಚಿಕ್ಕೋಡಿ (ಬೆಳಗಾವಿ):ಮಹಾರಾಷ್ಟ್ರದ ಮುಂಬೈಯಲ್ಲಿದ್ದ ಕರ್ನಾಟಕದ ವಿವಿಧ ಜಿಲ್ಲೆಗಳ ವಲಸಿಗ ಕಾರ್ಮಿಕರ ಪೈಕಿ 30ಕ್ಕೂ ಹೆಚ್ಚು ಕಾರ್ಮಿಕರು ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಸಿಲುಕಿದ್ದಾರೆ.

ಮಹಾರಾಷ್ಟ್ರದಿಂದ ಸುಮಾರು 30ಕ್ಕೂ ಹೆಚ್ಚು ಕಾರ್ಮಿಕರು ಕೊಗನೊಳಿ ಟೂಲ್ ನಾಕಾ ಬಳಿ ಬಂದಿದ್ದು, ಇದೀಗ ಕರ್ನಾಟಕ ಅಧಿಕಾರಿಗಳು ಮರಳಿ ಮಹಾರಾಷ್ಟ್ರಕ್ಕೆ ಹೋಗಲು ಸೂಚಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿನ ರಾಜ್ಯದ ಕಾರ್ಮಿಕರು

ರಾಜ್ಯದ ಒಳ ಬರಲು ಅನುಮತಿ ನೀಡಿ. ಬೇಕಾದರೇ 14 ದಿನ ನಮ್ಮನ್ನು ಕ್ವಾರಂಟೈನ್​ಗೆ ಒಳಪಡಿಸಿ. ನಾವು ಯಾವುದೇ ಕಾರಣಕ್ಕೂ ಮತ್ತೆ ಮಹಾರಾಷ್ಟ್ರಕ್ಕೆ ತೆರಳುವುದಿಲ್ಲ. ಅಲ್ಲಿ ನಮಗೆ ಯಾವುದೇ ವ್ಯವಸ್ಥೆ ಇಲ್ಲದೆ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮನ್ನು ಆದಷ್ಟು ಬೇಗ ನಮ್ಮ ಊರಿಗೆ ಕಳುಹಿಸಿಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details